ನೋಕಿಯಾ ಹೊಸ ಫೋನ್‌ಗಳನ್ನು ನೋಡಿದ್ದೀರಾ?

ಬುಧವಾರ, 14 ಡಿಸೆಂಬರ್ 2016 (10:00 IST)
ಒಂದು ಕಾಲದಲ್ಲಿ ನೋಕಿಯಾ ಫೋನ್ ಎಲ್ಲರ ಕೈಗಳಲ್ಲೂ ಇರುತ್ತಿತ್ತು. ಅದೊಂದು ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಆದರೆ ತೀವ್ರ ಸ್ಪರ್ಧೆಗೆ ನೋಕಿಯಾ ಮಾರುಕಟ್ಟೆಯಿಂದ ನಿರ್ಗಮಿಸಿದ್ದು ಇತಿಹಾಸ. ಇದೀಗ ಹೊಸ ಅವತಾರದಲ್ಲಿ ಬರುತ್ತಿದೆ.
 
ಬೇಸಿಕ್ ಹ್ಯಾಂಡ್‌ಸೆಟ್ ವಿಭಾಗದಲ್ಲಿ ಅತ್ಯಧಿಕ ಮಾರಾಟವಾಗುತ್ತಿದ್ದ ಫೋನ್ ಇದು. ಫಿನ್‌ಲ್ಯಾಂಡ್‍ನ ಎಚ್ಎಂಡಿ ಗ್ಲೋಬಲ್ ಕಂಪನಿ ನೋಕಿಯಾ ಕಂಪನಿಯನ್ನು ಖರೀಸಿದ್ದು ಗೊತ್ತೇ ಇದೆ. ಇದೀಗ ಈ ಕಂಪನಿ ತಯಾರಿಸಿದ ಎರಡು ಬೇಸಿಕ್ ಫೋನ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.
 
ನೋಕಿಯಾ 150, ನೋಕಿಯಾ 150 ಡ್ಯುಯಲ್ ಹೆಸರಿನ ಇವು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ. ಹೊಸ ವರ್ಷದಿಂದ ಈ ಫೋನ್‌ಗಳು ಲಭ್ಯವಾಗಲಿವೆ ಎಂದು ಕಂಪನಿ ಪ್ರಕಟಿಸಿದೆ. ಇವುಗಳ ಬೆಲೆ ಸುಮಾರು 26 ಡಾಲರ್ (ರೂ. 1800) ಎಂದು ಎಚ್ಎಂಡ್ದಿ ಗ್ಲೋಬಲ್ ಕಂಪನಿ ತಿಳಿಸಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ