ಎಫ್‌ಎಸ್‌ಎಸ್‌ಐ ಅನುಮತಿ ಇಲ್ಲದಿದ್ದರೂ ಬಾಬಾ ರಾಮದೇವ್ ನೂಡಲ್ಸ್‌ ಲಾಂಚ್

ಬುಧವಾರ, 18 ನವೆಂಬರ್ 2015 (18:22 IST)
ಯೋಗಗುರು ಬಾಬಾ ರಾಮದೇವ್ ಅವರ ಅಟ್ಟಾ ನೂಡಲ್ಸ್‌‌ಗೆ ಅನುಮತಿಯನ್ನು ನೀಡಿಲ್ಲ ಎಂದು ಎಫ್‌ಎಸ್‌ಎಸ್‌ಐ ತಿಳಿಸುವ ಮೂಲಕ ರಾಮದೇವ್ ನೂಡಲ್ಸ್‌ಗೆ ವಕ್ರದೆಸೆ ಷುರುವಾಗಿದೆ.
 
ನಿನ್ನೆ ಲಾಂಚ್ ಮಾಡಲಾದ ಪ್ಯಾಕೆಟ್ ಮೇಲೆ ಎಫ್‌ಎಸ್‌ಎಸ್‌ಐ ಅನುಮತಿ ಸೀಲ್ ಒತ್ತಲಾಗಿದೆ ಮತ್ತು ಲೈಸನ್ಸ್ ನಂಬರ್ ಕೂಡ ಇದೆ. ಆದರೆ ಈ ಲೈಸನ್ಸ್ ನಂಬರ್ ಎಲ್ಲಿಂದ ಬಂತು ಎಂಬ ಪ್ರಶ್ನೆ ಉದ್ಭವವಾಗಿದೆ.  

ಆದರೆ ಲೈಸನ್ಸ್ ತೆಗೆದುಕೊಳ್ಳದೇ ಅದನ್ನು ಲಾಂಚ್ ಮಾಡಿರುವುದು ತಪ್ಪಾಗಿದ್ದು, ಬಾಬಾ ರಾಮದೇವ್ ನೂಡಲ್ಸ್ ವಕ್ರಾಸನದಲ್ಲಿ ಸಿಲುಕಿದೆ. ಮ್ಯಾಗಿ ನೂಡಲ್ಸ್‌ಗಳಿಗೆ ನಿಷೇಧ ವಿಧಿಸಿದ ಬಳಿಕ ಮಾರುಕಟ್ಟೆಯಲ್ಲಿ ಅದರ ಲಾಭ ಪಡೆಯಲು ಬಾಬಾ ರಾಮದೇವ್ ತಮ್ಮ ಬ್ರಾಂಡ್ ನೂಡಲ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿಯೂ ಇದು ಯಾವುದೇ ವಿಷವಸ್ತುವಿಲ್ಲದ ಪರಿಶುದ್ಧ ಆಹಾರ ಎಂದು ಹೇಳಿದ್ದರು. ಪತಂಜಲಿ ಸಂಸ್ಥೆಯು ಪಾಸ್ತಾ ತಯಾರಿಕೆಗೆ ಅನುಮತಿ ಪಡೆದಿದ್ದು ಅದರಡಿಯಲ್ಲಿ ನೂಡಲ್ಸ್ ಸಹ ಬರುತ್ತದೆ ಎಂದು ರಾಮದೇವ್ ವಕ್ತಾರ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ