ವಾಹನ ವಿಮೆ: ಐದು ವರ್ಷಕ್ಕೊಮ್ಮೆ ಪಾವತಿಸಿ

ಬುಧವಾರ, 23 ಜುಲೈ 2014 (18:22 IST)
ನಿಮ್ಮ ಹತ್ತಿರ ಕಾರು ಅಥವಾ ಬೈಕ್ ಇದ್ದರೆ , ಅಥವಾ ಇವುಗಳನ್ನು ಖರೀಧಿಸಲು ಇಚ್ಛಿಸಿದ್ದರೆ , ಈ ಸುದ್ದಿಯನ್ನು ಖಂಡಿತವಾಗಿ ಓದಿ.  ಐಆರ್‌‌ಡಿಎ ಈಗ ಪ್ರತಿ ವರ್ಷ ವಿಮೆ ಕಟ್ಟುವ ಬದಲು ಐದು ವರ್ಷಗಳಿಗೊಮ್ಮೆ ವಿಮೆ ಮೊತ್ತ ಭರಿಸುವ ಯೋಜನೆ ಜಾರಿಗೆ ತರುವ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ನಿವು ಕಡಿಮೆ ಮೊತ್ತ ಭರಿಸಬೇಕಾಗುತ್ತದೆ. 
 
ಪ್ರತಿ ವರ್ಷ ವಿಮಾ ಕಂಪೆನಿಗೆ ಹಣ ಭರಿಸಬೇಕಾಗುತ್ತದೆ ಮತ್ತು ಎಜೆಂಟ್‌‌‌ಗಳಿಂದ ಫೋನ್‌‌ ಬರುತ್ತದೆ.  ಪ್ರತಿವರ್ಷ ಜನರು ವಿಮೆ ಕಟ್ಟಲು ಕಷ್ಟ ಪಡಬೇಕಾಗುತ್ತದೆ. ಆದರೆ ಇದರಿಂದ ಪ್ರತಿ ವರ್ಷ ವಿಮೆ ಮೊತ್ತ ಭರಿಸುವುದು ನಿಲ್ಲುತ್ತದೆ. ಈ ಕುರಿತು ಶೀಘ್ರದಲ್ಲಿ ನಿರ್ದೆಶನ ಜಾರಿಗೆ ಬರಲಿದೆ ಎಂದು ಆರ್ಥಿಕ ಪತ್ರಿಕೆಯಾದ ದಿ ಎಕೊನಾಮಿಕ್ಸ್‌‌ ಟೈಮ್ಸ್‌‌ ವರದಿ ಮಾಡಿದೆ.
 
ಐಆರ್‌ಡಿಎಯ ಒಬ್ಬ ಅಧಿಕಾರಿ ಪತ್ರಿಕೆಗೆ ತಿಳಿಸಿರುವ ಪ್ರಕಾರ , ಕೆಲವು ವಿಮಾ ಕಂಪೆನಿಗಳು ಈ ಕುರಿತು ಪ್ರಸ್ಥಾವನೆ ಸಲ್ಲಿಸಿವೆ ಮತ್ತು ನಾವು ಈ ಕುರಿತು ಚಿಂತಿಸುತ್ತಿದ್ದೆವೆ. ನಾವು ಮೊದಲು ದ್ವಿಚಕ್ರವಾಹನ ಸೆಗ್‌‌‌ಮೆಂಟ್‌‌ನಲ್ಲಿ ಇದನ್ನು ಜಾರಿಗೆ ತರುತ್ತೆವೆ. ಇದರ ಫೀಡ್‌ಬ್ಯಾಕ್‌ ಆಧಾರದ ಮೇಲೆ ಕಾರು ಮತ್ತು ಇತರ ವಾಹನಗಳಿಗೂ ಕೂಡ ಈ ಹೊಸ ನೀತಿ ಅನ್ವಯಗೊಳಿಸುವುದಾಗಿ ತಿಳಿಸಿದ್ದಾರೆ. 
 
ಬಹಳಷ್ಟು ಜನರು ವಾಹನ ಖರೀಧಿಯ ನಂತರ ಎರಡನೇ ಬಾರಿ ವಿಮೆ ಕಟ್ಟುವುದಿಲ್ಲ. ಇದಕ್ಕಾಗಿ ಧಿರ್ಘಾವಧಿ ವಿಮಾ ಇಂಸ್ಟ್ರುಮೆಂಟ್‌‌ ಅವಶ್ಯಕತೆ ಇದೆ.  
 
ಈ ಕುರಿತು ಎಲ್ಲಾ ಕಂಪೆನಿಗಳು ತಮ್ಮ ಆದಾಯ-ನಷ್ಟದ ಕುರಿತು ಚಿಂತಿಸುತ್ತಿವೆ ಮತ್ತು ಇದರ ನಂತರ ಈ ವಿಚಾರಕ್ಕೆ ಗ್ರೀನ್ ಸಿಗ್ನಲ್‌ ನೀಡಿವೆ.  

ವೆಬ್ದುನಿಯಾವನ್ನು ಓದಿ