ವಿಡಿಯೋ ಅವಧಿಯನ್ನು 60 ಸೆಕೆಂಡ್‌ಗೆ ಹೆಚ್ಚಿಸಿದ ಇನ್‌ಸ್ಟಾಗ್ರಾಮ್

ಗುರುವಾರ, 31 ಮಾರ್ಚ್ 2016 (13:21 IST)
ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಸಂತಸದ ಸುದ್ದಿ. ಜನಪ್ರಿಯ ಫೋಟೋ ಶೇರಿಂಗ್ ಅಪ್ಲಿಕೇಶನ್ 60 ಸೆಕೆಂಡ್‌ಗೆ ವಿಡಿಯೋ ಅವಧಿಯನ್ನು ವಿಸ್ತರಿಸಿದೆ ಎಂದು ವರದಿಗಳು ತಿಳಿಸಿದೆ.
2013 ರಲ್ಲಿ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಪರಿಚಯಿಸಿದ್ದಾಗ, ಈ ಅಪ್ಲಿಕೇಶನ್ ಕೇವಲ 15 ಸೆಕೆಂಡ್‌‌ಗಳ ವಿಡಿಯೋ‌ಗಳಿಗೆ ಮಾತ್ರ ಸಿಮೀತವಾಗಿತ್ತು. ಫೋಟೋ ಶೇರಿಂಗ್ ಅಪ್ಲಿಕೇಶನ್, ಇಮೇಜ್ ಕಲೆಕ್ಷನ್‌ನಿಂದ ವಿಡಿಯೋ ಸಂಗ್ರಹಕ್ಕೆ ಬದಲಾಗುತ್ತಿದೆ.
 
ಇನ್‌ಸ್ಟಾಗ್ರಾಮ್ ತನ್ನ  ಬ್ಲಾಗ್ ಪೋಸ್ಟ್‌ನಲ್ಲಿ ಆರು ತಿಂಗಳಿನಿಂದ ಈ ಅಪ್ಲಿಕೇಶನ್‌ನಲ್ಲಿ ವಿಡಿಯೋ ನೋಡುಗರ ಸಂಖ್ಯೆ 40 ಪ್ರತಿಶತದಷ್ಟು ಏರಿಕೆಯಾಗಿದೆ.
 
ವಿಡಿಯೋಗಳ ಅವಧಿ ಹೆಚ್ಚಿಸುವ ಜೊತೆಗೆ, ಈ ಅಪ್ಲಿಕೇಶನ್‌ ಐಒಎಸ್ ಬಳಕೆದಾರರಿಗೆ ಮಲ್ಟಿಪಲ್ ವಿಡಿಯೋ ವಿಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.
 
ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಈ ಅಪ್ಡೇಟ್ ದೊರೆಯಲಿದೆ ಎಂದು ಮೂಲಗಳು ತಿಳಿಸಿದೆ.

ವೆಬ್ದುನಿಯಾವನ್ನು ಓದಿ