ಎಪಿಎಲ್ ಕುಟುಂಬಗಳಿಗೆ ಸಬ್ಸಿಡಿ ಆಹಾರ ನಿಲ್ಲಿಸಬಾರದು: ಒಡಿಶಾ

ಸೋಮವಾರ, 22 ಡಿಸೆಂಬರ್ 2014 (10:29 IST)
ಬಡತನ ರೇಖೆಯ ಮೇಲಿರುವ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಆಹಾರಧಾನ್ಯಗಳ ಪೂರೈಕೆಯನ್ನು ನಿಲ್ಲಿಸಬಾರದೆಂದು ಒಡಿಶಾ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಲ್ಲಿ ಫಲಾನುಭವಿಗಳನ್ನು ಗುರ್ತಿಸುವ ಕಾರ್ಯ ಪೂರ್ಣವಾಗುವ ತನಕ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪೂರೈಸುವಂತೆ ತಿಳಿಸಿದೆ. ಕೇಂದ್ರ ಸರ್ಕಾರ 2015ರ ಏಪ್ರಿಲ್ 5ರಿಂದ ಎಪಿಎಲ್ ಕುಟುಂಬಗಳಿಗೆ ಆಹಾರ ಧಾನ್ಯ ಪೂರೈಕೆಯನ್ನು ನಿಲ್ಲಿಸಲು ನಿರ್ಧರಿಸಿದೆ.

ಆದರೆ ಈ ಗಡುವನ್ನು ಆಗಸ್ಟ 2015ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ಕೋರಿದೆ. ಏಕೆಂದರೆ ಸರ್ಕಾರ ಆ ತಿಂಗಳಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸುವ ನಿರೀಕ್ಷೆಯಿದೆ.

ಕೊರಾಪುಟ್-ಬೊಲಂಗಿರ್-ಕಾಲಹಂಡಿ ಪ್ರದೇಶದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕುಟುಂಬಗಳ ಜನರ ಸಂಕಷ್ಟ ಬಹುಮಟ್ಟಿಗೆ ಒಂದೇ ತೆರನಾಗಿದ್ದು ಒಡಿಶಾವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎಪಿಎಲ್ ಕುಟುಂಬಗಳಿಗೆ ಆಹಾರ ಧಾನ್ಯ ಪೂರೈಸಲು ಅವಕಾಶ ನೀಡಬೇಕು ಎಂದು ಆಹಾರ ಪೂರೈಕೆ ಕಾರ್ಯದರ್ಶಿ ಮಧುಸೂದನ್ ಪಾಡಿ ಕೋರಿದ್ದಾರೆ. 

ವೆಬ್ದುನಿಯಾವನ್ನು ಓದಿ