ಚಿನ್ನದ ದರ 100ರೂ. ಕುಸಿತ, ಪ್ರತಿ 10 ಗ್ರಾಂ.ಗೆ 27,050 ರೂ.

ಸೋಮವಾರ, 27 ಏಪ್ರಿಲ್ 2015 (16:14 IST)
ಚಿನಿವಾರ ಪೇಟೆಯಲ್ಲಿ ಚಿನ್ನದ ದರಗಳು 110 ರೂ. ಕುಸಿತ ಉಂಟಾಗಿದ್ದು, ಪ್ರತಿ ಹತ್ತು ಗ್ರಾಂ.ಗೆ 27,050 ರೂ.ಗೆ ತಲುಪಿದೆ. ಆಭರಣವ್ಯಾಪಾರಿಗಳು ಮತ್ತು ಚಿಲ್ಲರೆ ಖರೀದಿದಾರರ ಬೇಡಿಕೆ ತಗ್ಗಿದ್ದರಿಂದ ಈ ಕುಸಿತ ಉಂಟಾಗಿದೆ ಎಂದು ಹೇಳಿದರು.

ಆದಾಗ್ಯೂ, ಬೆಳ್ಳಿ ದರಗಳು 150 ರೂ. ಚೇತರಿಸಿಕೊಂಡು ಪ್ರತಿ ಕೆಜಿಗೆ 36, 500 ರೂ.ಗೆ ತಲುಪಿದೆ. ಕೈಗಾರಿಕೆ ಘಟಕಗಳ ಖರೀದಿಯಿಂದ ಈ ಬೆಳವಣಿಗೆ ಉಂಟಾಗಿದೆ. ಆದರೆ ವಿದೇಶದಲ್ಲಿ ಉತ್ತಮ ಪ್ರವೃತ್ತಿ ಕಂಡುಬಂದಿದ್ದರಿಂದ ಚಿನ್ನದ ದರ ತೀವ್ರ ಕುಸಿತವಾಗುವುದನ್ನು ತಡೆಯಿತು.

ರಾಷ್ಟ್ರ ರಾಜಧಾನಿಯಲ್ಲಿ 99.9 ಮತ್ತು 99.5 ಶೇ. ಶುದ್ಧತೆ ಇರುವ ಚಿನ್ನವು 110 ರೂ. ಕುಸಿದು ಪ್ರತಿ ಹತ್ತು ಗ್ರಾಂ.ಗೆ 27,050 ಮತ್ತು 26, 900ರೂ.ಗೆ ಕುಸಿದಿದೆ. ಶನಿವಾರದ ವಹಿವಾಟಿನಲ್ಲಿ ಇದು 30 ರೂ. ಕಳೆದುಕೊಂಡಿತ್ತು. 
ಸವರನ್ ಪ್ರತಿ 8 ಗ್ರಾಂ. ನಾಣ್ಯಕ್ಕೆ 23, 700 ರೂ. ತಲುಪಿದೆ.ಬೆಳ್ಳಿಯು 150 ರೂ. ಚೇತರಿಕೆಯಾಗಿ ಪ್ರತಿ ಕೆಜಿಗೆ 36,500 ರೂ.ಗೆ ತಲುಪಿದೆ.
 

ವೆಬ್ದುನಿಯಾವನ್ನು ಓದಿ