43 ರಾಷ್ಟ್ರಗಳಿಗೆ ಆನ್‌ಲೈನ್ ವೀಸಾ ಸೌಲಭ್ಯ

ಶುಕ್ರವಾರ, 28 ನವೆಂಬರ್ 2014 (11:53 IST)
ಪ್ರವಾಸೋದ್ಯಮ ಕ್ಷೇತ್ರಕ್ಕೆ ಗಮನಾರ್ಹ ಒತ್ತು ನೀಡಿರುವ ಸರ್ಕಾರ ಗುರುವಾರ ಅಮೆರಿಕ, ಆಸ್ಟ್ರೇಲಿಯಾ,ಜಪಾನ್, ಇಸ್ರೇಲ್, ಜರ್ಮನಿ ಮತ್ತು ಸಿಂಗಾಪುರ ಸೇರಿದಂತೆ 43 ರಾಷ್ಟ್ರಗಳಿಗೆ ಆನ್‌ಲೈನ್ ವೀಸಾ ಸೌಲಭ್ಯ ಆರಂಭಿಸಿದೆ.

ಪ್ರವಾಸಿಗಳು ತಮ್ಮ ಮನೆಗಳಿಂದಲೇ ವೀಸಾಗೆ ಅರ್ಜಿ ಸಲ್ಲಿಸಿ 72 ಗಂಟೆಗಳಲ್ಲಿ ವೀಸಾ ಪಡೆಯಬಹುದು. ವಿದ್ಯುನ್ಮಾನ ಪ್ರವಾಸ ಅಧಿಕಾರ 30 ದಿನಗಳಿಗೆ ಊರ್ಜಿತವಾಗಿರುತ್ತದೆ ಮತ್ತು ವೀಸಾ ಶುಲ್ಕವನ್ನು 62 ಡಾಲರ್‌ಗೆ ನಿಗದಿಮಾಡಲಾಗಿದೆ.

ರಜೆ ಮೇಲೆ ಪ್ರಯಾಣ ಮಾಡುವವರು, ಅಲ್ಪಾವಧಿಯ ವೈದ್ಯಕೀಯ ಚಿಕಿತ್ಸೆ, ಮಾಮೂಲಿ ವ್ಯವಹಾರ ಭೇಟಿ ಅಥವಾ ಸ್ನೇಹಿತರು ಅಥವಾ ಸಂಬಂಧಿಗಳನ್ನು ಭೇಟಿಮಾಡುವವರು ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿದ್ದಾರೆ.  ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೊಚ್ಚಿ, ಗೋವಾ, ಹೈದರಾಬಾದ್, ಕೊಲ್ಕತ್ತಾ ಮತ್ತು ತಿರುವನಂತಪುರಂ ಸೇರಿದಂತೆ 9 ವಿಮಾನನಿಲ್ದಾಣಗಳಲ್ಲಿ ಈ ಸೌಲಭ್ಯ ಲಭ್ಯವಿದೆ. 

ವೆಬ್ದುನಿಯಾವನ್ನು ಓದಿ