ಇದು ಸತ್ಯ: ಕೇವಲ 1 ಪ್ರತಿಶತ ಜನರಿಂದ ಆದಾಯ ತೆರಿಗೆ ಪಾವತಿ

ಮಂಗಳವಾರ, 3 ಮೇ 2016 (14:48 IST)
ನವದೆಹಲಿ : ಕಳೆದ 15 ವರ್ಷಗಳ ಅವಧಿಯಲ್ಲಿ ಆದಾಯ ತೆರಿಗೆ ಸಂಗ್ರಹ ಪ್ರಮಾಣ ಒಂಬತ್ತು ಪಟ್ಟು ಹೆಚ್ಚಾಗಿದ್ದರೂ ಸಹ ಭಾರತದ ಒಟ್ಟು ಜನಸಂಖ್ಯೆಯಲ್ಲಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಕಡಿಮೆ ಇದೆ.
ತೆರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿ 1 ಪ್ರತಿಶತ ಜನರು ಮಾತ್ರ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
 
2014-15 ರ ಆರ್ಥಿಕ ವರ್ಷದಲ್ಲಿ 5.17 ಕೋಟಿ, 2013-14 ರ ಆರ್ಥಿಕ ವರ್ಷದಲ್ಲಿ 5.20 ಕೋಟಿ ಮತ್ತು 2012-13 ರ ಆರ್ಥಿಕ ವರ್ಶದಲ್ಲಿ 4.72 ಕೋಟಿ ತೆರಿಗೆದಾರರು ತೆರಿಗೆ ಹಣವನ್ನು ಪಾವತಿ ಮಾಡಿದ್ದರು.
 
2012-13 ರ ಆರ್ಥಿಕ ವರ್ಷದಲ್ಲಿ 2.87 ಕೋಟಿ ತೆರಿಗೆದಾರರು ತೆರಿಗೆ ಇಲಾಖೆಗೆ ಆದಾಯ ತೆರಿಗೆ ಮರುಪಾವತಿ ವಿವರವನ್ನು ಸಲ್ಲಿಸಿದ್ದು, ಆದರೆ ಈ ಪೈಕಿ ಕೇವಲ 1.62 ಕೋಟಿ ತೆರಿಗೆದಾರರು ತೆರಿಗೆ ಹಣವನ್ನು ಪಾವತಿ ಮಾಡಿಲ್ಲ. 
 
ಪಾರದರ್ಶಕತೆ ಕಾಪಾಡವ ಹಿನ್ನೆಲೆಯಲ್ಲಿ ಸರಕಾರ ಕಳೆದ 15 ವರ್ಷಗಳ ತೆರಿಗೆದಾರರ ಮಾಹಿತಿಯನ್ನು ಬಹಿರಂಗಗೊಳಿಸಿದೆ.
 
ಭಾರತದ ಒಟ್ಟು 5,430 ತೆರಿಗೆದಾರರು 1 ಕೋಟಿ ರೂಪಾಯಿಗಳಿಗಿಂತ ಹೆಚ್ಚು ತೆರಿಗೆ ಹಣವನ್ನು ಪಾವತಿ ಮಾಡಿದ್ದು, ಈ ಪೈಕಿ 5 ಸಾವಿರ ತೆರಿಗೆದಾರರು 1 ಕೋಟಿ ರೂಪಾಯಿಗಳಿಂದ 5 ಕೋಟಿ ರೂಪಾಯಿವರೆಗೂ ತೆರಿಗೆ ಹಣವನ್ನು ಪಾವತಿ ಮಾಡಿದ್ದಾರೆ.
 
2000-01 ರ ಆರ್ಥಿಕ ವರ್ಷದಲ್ಲಿ 31,764 ಕೋಟಿ ತೆರಿಗೆ ಹಣ ಸಂಗ್ರಹವಾಗಿದ್ದು, 2015-16 ರ ಆರ್ಥಿಕ ವರ್ಷದವರಿಗೂ 2.86 ಲಕ್ಷ ಕೋಟಿ ಹೆಚ್ಚಳವಾಗಿದೆ.

ವೆಬ್ದುನಿಯಾವನ್ನು ಓದಿ