ಭಾರತದ ಮಾರುಕಟ್ಟೆಗೆ ಒಪ್ಪೊ ಎ-37 ಸ್ಮಾರ್ಟ್‌ಪೋನ್ ಬಿಡುಗಡೆ

ಸೋಮವಾರ, 27 ಜೂನ್ 2016 (11:35 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಒಪ್ಪೊ, ಎ-37 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 
 
ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಜುಲೈ 1 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, ಗ್ರಾಹಕರಿಗೆ 11,990 ರೂಪಾಯಿಗಳಲ್ಲಿ ಲಭ್ಯವಾಗಲಿದೆ.
 
ಒಪ್ಪೊ ಎ-37 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 2.5ಡಿ ಆರ್ಕ್ ಎಡ್ಜ್ ಸ್ಕ್ರೀನ್ ಮತ್ತು 293ಪಿಪಿಐ ಪಿಕ್ಸೆಲ್ ಡೆನ್ಸಿಟಿ ಜೊತೆಗೆ 5 ಇಂಚ್ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಹೊಂದಿದ್ದು, ಗೀರುಗಳನ್ನು ತಡೆಗಟ್ಟಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವೈಶಿಷ್ಟ್ಯವನ್ನು ಹೊಂದಿದೆ. 
 
ಈ ಹೊಸ ಆವೃತ್ತಿಯ ಸ್ಮಾರ್ಟ್‌ಪೋನ್ ಎಲ್‌ಇಡಿ ಫ್ಲ್ಯಾಶ್, ಅಲ್ಟ್ರಾ ಎಚ್‌ಡಿ ಶೂಟಿಂಗ್ ಮೋಡ್, ಬಿಎಸ್‌ಐ ಸೆಂಸಾರ್ ಮತ್ತು ಎಫ್/2.2 ಅಪರ್ಚರ್ ಜೊತೆಗೆ 8 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದು 1080ಪಿ ಮೀಡಿಯೊ ರೆಕಾರ್ಡಿಂಗ್‌ ಮಾಡಲು ಸಹಕರಿಸುತ್ತದೆ. ಫ್ಲ್ಯಾಶ್ ಮತ್ತು ಒಮ್ನಿಬಿಎಸ್‌ಐ+ ಜೊತೆಗೆ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
 
ಒಪ್ಪೊ ಎ-37 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 1.5ಜಿಎಚ್‌ಝಡ್ ಆಕ್ಟಾ ಕೋರ್ ಮೀಡಿಯಾ ಟೆಕ್ ಎಮ್‌ಟಿ 6750 ಪ್ರೊಸೆಸರ್, 2 ಜಿಬಿ ರ್ಯಾಮ್ ಮತ್ತು 16 ಜಿಬಿ ಆಂತರಿಕ ಸ್ಟೋರೇಜ್ ಜೊತೆಗೆ 128 ಜಿಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಈ ಪೋನ್‌ಗಳು ಆಂಡ್ರಾಯ್ಡ್ 5.1 ಲಾಲಿಪಾಪ್ ವೈಶಿಷ್ಟ್ಯ ಹೊಂದಿದ್ದು, 3ಜಿ, 4ಜಿ, ಬ್ಲೂಟೂತ್, ಎನ್‌ಎಫ್‌ಸಿ, ವೈಫೈ, ಜಿಪಿಆರ್‌ಎಸ್/ಇಡಿಜಿಇ, ಜಿಪಿಎಸ್/ಎ-ಜಿಪಿಎಸ್, ಯುಎಸ್‌ಬಿ-ಒಟಿಜಿ ಮತ್ತು ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿ ಜೊತೆಗೆ 2630 ಎಮ್‌ಎಎಚ್ ಬ್ಯಾಟರಿ ಹೊಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ