ಪ್ಯಾನಾಸೋನಿಕ್ ಎಲುಗಾ ಆರ್ಕ್ ಮಾಡೆಲ್ ಫೋನ್ ಮಾರುಕಟ್ಟೆಗೆ

ಶನಿವಾರ, 9 ಏಪ್ರಿಲ್ 2016 (20:05 IST)
ಮೊಬೈಲ್ ತಯಾರಿಕಾ ಸಂಸ್ಥೆಯಾದ ಪ್ಯಾನಾಸೋನಿಕ್, ಎಲುಗಾ ಆರ್ಕ್ ವೈಶಿಷ್ಟ್ಯದ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 
ಈ ಸ್ಮಾರ್ಟ್‌ಪೋನ್‌ಗಳು 4ಜಿ ಎಲ್‌ಟಿಇ ವೈಶಿಷ್ಟ್ಯ ಹೊಂದಿದ್ದು, ಮೊಬೈಲ್ ಡೇಟಾ ಬಳಸಿಕೊಂಡು ವಾಯಸ್ ಕಾಲ್ ಮಾಡಲು ಸಹಕರಿಸುತ್ತದೆ. ಈ ಆವೃತ್ತಿಗಳು ಐಆರ್ ಸೆನ್ಸಾರ್ ಬಳಸಿಕೊಂಡು ಐಆರ್ ಸಂಬಂಧಿತ ಮನೆ ವಿದ್ಯುನ್ಮಾನ ವಸ್ತುಗಳನ್ನು ಕಂಟ್ರೋಲ್‌ ಮಾಡುತ್ತದೆ.
 
ಪ್ಯಾನಾಸೋನಿಕ್ ಎಲುಗಾ ಆರ್ಕ್ ಆವೃತ್ತಿಗಳು, 720x1280 ಫಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 4.7 ಇಂಚಿನ ಐಪಿಎಸ್ ಡಿಸ್‌ಪ್ಲೇ ಹೊಂದಿದೆ. 2 ಜಿಬಿ ರ್ಯಾಮ್ ಜೊತೆಗೆ ಕ್ವಾಡ್ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 410, ಎಸ್‌ಒಸಿಯ 1.2ಜಿಎಚ್‌ಝಡ್ ಶಕ್ತಿಯ ಆಡ್ರಿನೋ 306 ಜಿಪಿಯು ಹೊಂದಿದೆ. 16 ಜಿಬಿ ಆಂತರಿಕ ಸ್ಟೋರೆಜ್ ಹೊಂದಿದ್ದು, 32 ಜಿಬಿಯವರೆಗೂ ವಿಸ್ತರಿಸಬಹುದಾದ ಸಾಮರ್ಥ್ಯ ಹೊಂದಿದೆ.
 
ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು, 8 ಮೆಗಾ ಫಿಕ್ಸೆಲ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲಾಶ್ ಹೊಂದಿದ್ದು, 5 ಮೆಗಾ ಫಿಕ್ಸೆಲ್‌ನ ಫ್ರಂಟ್ ಕ್ಯಾಮೆರಾ ಹೊಂದಿದೆ. ವೇಗವಾಗಿ ಬ್ಯಾಟರಿ ಚಾರ್ಚ್‌ ಮಾಡುವ 1.0 ಕ್ವಾಲ್ಕಾಮ್‌ನ 1800ಎಮ್‌ಎಎಚ್ ಬ್ಯಾಟರಿ ಹೊಂದಿದೆ. 
 
ಪ್ಯಾನಾಸೋನಿಕ್ ಎಲುಗಾ ಆರ್ಕ್ ಆವೃತ್ತಿ ಡ್ಯುಯಲ್ ಸಿಮ್ ಆಯ್ಕೆ ಹೊಂದಿದ್ದು, 4ಜಿ, ಎಲ್‌ಟಿಇ ಬ್ರ್ಯಾಂಡ್, 3ಜಿ ಎಚ್‌ಎಸ್‌ಪಿಎ ಪ್ಲಸ್, ವೈಪೈ 802.11 ಬಿ/ಜಿ/ಎನ್, ಬ್ಲೂತೂತ್ 4.0 ಮತ್ತು ಮುಖ್ಯ ಕನೆಕ್ಟಿವಿಟಿ ಸೌಲಭ್ಯವನ್ನು ಹೊಂದಿದ್ದು, ಕೇವಲ ಒಂದು ಸಿಮ್ ಮುಖಾಂತರ ಮಾತ್ರ 4ಜಿ ಕನೆಕ್ಟಿವಿಟಿಗೆ ಸ್ಪಂದಿಸುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿದೆ. 
 
ಈ ಆವೃತ್ತಿಗಳು 5.1 ಆಂಡ್ರಾಯ್ಡ್ ಲಾಲಿಪಾಪ್ ಹೊಂದಿದ್ದು, ಮೂರು ಬಣ್ಣಗಳಲ್ಲಿ ಹ್ಯಾಂಡ್‌ಸೆಟ್ ಲಭ್ಯವಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ