ಫ್ಯೂಚರ್ ಗ್ರೂಪ್ ಜತೆ ಸಹಯೋಗ ಹೊಂದಲಿರುವ ರಾಮದೇವ್ ಪತಂಜಲಿ

ಶುಕ್ರವಾರ, 9 ಅಕ್ಟೋಬರ್ 2015 (14:36 IST)
ಬಾಬಾ ರಾಮದೇವ್ ಅವರ ಪತಂಜಲಿಯು ಫ್ಯೂಚರ್ ಗ್ರೂಪ್ ಜತೆ ಸಹಯೋಗ ಹೊಂದಿ ಅದರ ಮಾರಾಟ ಕೇಂದ್ರಗಳ ಮೂಲಕ ಉತ್ಪನ್ನಗಳನ್ನು ಮಾರಲಿದೆ.
 
 20 ತಿಂಗಳಲ್ಲಿ ಪತಂಜಲಿ ಜತೆ 1000 ಕೋಟಿ ರೂ. ವ್ಯವಹಾರಕ್ಕೆ ನಾವು ಎದುರುನೋಡುತ್ತಿದ್ದೇವೆ ಎಂದು ಫ್ಯೂಚರ್ ಗ್ರೂಪ್ ಕಿಶೋರ್ ಬಿಯಾನಿ ತಿಳಿಸಿದರು.

 ಹೊಂದಾಣಿಕೆ ಕುರಿತು ಪ್ರಕಟಿಸಿದ ರಾಮದೇವ್, ನಾವು ನಮ್ಮ ಉತ್ಪನ್ನಗಳ ಮಾರಾಟಕ್ಕೆ ಸ್ವದೇಶಿ ಚಿಲ್ಲರೆ ಸರಪಳಿಯನ್ನು ಹುಡುಕುತ್ತಿದ್ದು,  ಫ್ಯೂಚರ್ ಗ್ರೂಪ್ ಬಿಗ್ ಬಜಾರ್ ನಮಗೆ ಹೊಂದಿಕೆಯಾಗಿದೆ ಎಂದು ರಾಮದೇವ್ ಹೇಳಿದರು.
 
 ವೈದ್ಯಕೀಯ, ಆಹಾರ ವಸ್ತುಗಳು ಮತ್ತು ಕಾಸ್ಮೆಟಿಕ್ಸ್ ಮುಂತಾದ ವಿವಿಧ ವಿಭಾಗಗಳಲ್ಲಿ ಉತ್ಪನ್ನಗಳನ್ನು ಆಫರ್ ಮಾಡಿರುವ ಕಂಪನಿಯು  ನೀಲಗಿರೀಸ್, ಫುಡ್ ಬಜಾರ್, ಫುಡ್ ಹಾಲ್ ಮತ್ತು ಬಿಗ್ ಬಜಾರ್ ಮುಂತಾದ ಫ್ಯೂಚರ್ ಮಾರಾಟ ಕೇಂದ್ರಗಳಲ್ಲಿ ಉತ್ಪನ್ನಗಳ ಮಾರಾಟಕ್ಕೆ ವಿಶೇಷ ಹಕ್ಕನ್ನು ಪಡೆದಿದೆ.

 ಆಯುರ್ವೇದ ವಿಜ್ಞಾನವನ್ನು ಇತ್ತೀಚಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ಸ್ಥಾಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಪತಂಜಲಿ, ವಾರ್ಷಿಕ ಆದಾಯದಲ್ಲಿ ಪ್ರಾಕ್ಟರ್ ಮತ್ತು ಗ್ಯಾಂಬಲ್, ಎಮಾಮಿ ಮತ್ತು ಜ್ಯೋತಿ ಲ್ಯಾಬ್ಸ್ ಮುಂತಾದ ಲಿಸ್ಟಡ್ ಕಂಪನಿಗಳನ್ನು ಮೀರಿಸಿದೆ. 
 

ವೆಬ್ದುನಿಯಾವನ್ನು ಓದಿ