ಈ ವರ್ಷ ಪೇಟಿಎಂ ವ್ಯಾಪಾರ ರೂ.200 ಕೋಟಿ!

ಶುಕ್ರವಾರ, 9 ಡಿಸೆಂಬರ್ 2016 (12:14 IST)
ಊಹೆಗೂ ಮೀರಿ ಈ ವರ್ಷ ರೂ.200 ಕೋಟಿ ವ್ಯವಹಾರ ದಾಖಲೆ ಮಾಡಲಿರುವುದಾಗಿ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಶೇಖರ್ ಶರ್ಮಾ ತಿಳಿಸಿದ್ದಾರೆ. ಈ ಹಿಂದೆ ದಿನಕ್ಕೆ ರೂ.25ರಿಂದ 30 ಲಕ್ಷ ವ್ಯವಹಾರ ನಡೆಯುತ್ತಿತ್ತೆಂದು, ದೊಡ್ಡ ಮೊತ್ತದ ನೋಟುಗಳನ್ನು ರದ್ದು ಮಾಡಿದ ಮೇಲೆ ರೂ.50 ರಿಂದ 60 ಲಕ್ಷಕ್ಕೂ ಹೆಚ್ಚು ವ್ಯಾಪಾರ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
 
ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯೂಪಿಐ) ಸಹ ಜೊತೆಯಾದರೆ ಪ್ರತಿ ಬ್ಯಾಂಕ್ ಖಾತೆಗೆ ಪೇಮೆಂಟ್ ಆಪ್‌ ಆಗಿ ಸೇವೆಗಳನ್ನು ಕೊಡುವ ಮಟ್ಟಕ್ಕೆ ಬೆಳೆಯಬೇಕೆಂದು ಯೋಜಿಸಿದ್ದೇವೆ ಎಂದು ಶರ್ಮ ವರದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದರು.
 
ಟೆಕ್ನಾಲಜಿ ಸ್ಟಾರ್ಟಪ್ ಸಂಸ್ಥೆಗಳು ಸದ್ಯಕ್ಕೆ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗಗಳ ಮೇಲೆ ದೃಷ್ಟಿ ಹರಿಸುವ ಅವಶ್ಯಕತೆ ಇದೆ ಎಂದು ಶರ್ಮಾ ಸೂಚಿಸಿದರು. ದೀರ್ಘಕಾಲದಲ್ಲಿ ಅಮೆರಿಕಾ ಮಾರುಕಟ್ಟೆಗೂ ನಮ್ಮ ಸೇವೆಯನ್ನು ವಿಸ್ತರಿಸಬೇಕೆಂಬುದು ನಮ್ಮ ಗುರಿ ಎಂದರು. ಇನ್ನೊಂದು ಕಡೆ ಪೇಮೆಂಟ್ ಬ್ಯಾಂಕ್‌ ತೆರೆಯುವ ಕೆಲಸಗಳು ನಡೆಯುತ್ತಿವೆ, ಮಾರ್ಚ್ 2017ರ ಒಳಗೆ ಇದನ್ನು ಆರಂಭಿಸಬೇಕಿದೆ ಎಂದಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ