ಮಾರ್ಚ್ 16ರಿಂದ ಪೆಟ್ರೋಲ್ ಬಂಕ್ ಹಗಲಿನಲ್ಲಿ ಮಾತ್ರ ಕಾರ್ಯನಿರ್ವಹಣೆ

ಸೋಮವಾರ, 2 ಮಾರ್ಚ್ 2015 (17:27 IST)
ದೇಶಾದ್ಯಂತ ಮಾರ್ಚ್ 16ರಿಂದ ಪೆಟ್ರೋಲ್ ಬಂಕ್‌ಗಳು ಹಗಲಲ್ಲಿ ಮಾತ್ರ ಕಾರ್ಯನಿರ್ವಹಣೆ ಮಾಡಲು ನಿರ್ಧರಿಸಿದೆ. ದೇಶಾದ್ಯಂತ ಸುಮಾರು 48000 ಪೆಟ್ರೋಲ್ ಬಂಕ್‌ಗಳಿದ್ದು, ಹಗಲಿನಲ್ಲಿ ಮಾತ್ರ ಕಾರ್ಯನಿರ್ವಹಣೆಯಿಂದ ಪೆಟ್ರೋಲ್  ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕಮೀಷನ್ ಹೆಚ್ಚಳಕ್ಕೆ ಆಗ್ರಹಿಸಿ ಅಖಿಲ ಭಾರತ ಪೆಟ್ರೋಲಿಯಂ ಡೀಲರ್ಸ್ ಸಂಘ ಈ ನಿರ್ಧಾರ ಕೈಗೊಂಡಿದೆ. ಇದರಿಂದ ಸಂಜೆ ಏಳರಿಂದ ಬೆಳಿಗ್ಗೆವರೆಗೆ ಪೆಟ್ರೋಲ್ ಬಂಕ್‌ಗಳು ಕಾರ್ಯಸ್ಥಗಿತಗೊಳಿಸಲಿವೆ.

ಇದಲ್ಲದೇ ಮಾ. 10ರಂದು ಕೂಡ ಪೆಟ್ರೋಲಿಯಂ ಉತ್ಪನ್ನ ಖರೀದಿಸದಿರಲು ಕೂಡ ಡೀಲರ್ಸ್ ನಿರ್ಧರಿಸಿದ್ದಾರೆ. ಹಗಲಿನಲ್ಲಿ ಕಾರ್ಯನಿರ್ವಹಿಸುವ ನಿರ್ಧಾರಕ್ಕೆ ಬೆಂಗಳೂರಿನ 600 ಪೆಟ್ರೋಲ್ ಬಂಕ್‌ಗಳೂ ಕೂಡ ಒಪ್ಪಿಗೆ ಸೂಚಿಸಿವೆ. 

ವೆಬ್ದುನಿಯಾವನ್ನು ಓದಿ