ಪೆಟ್ರೋಲ್, ಡೀಸೆಲ್ ಮತ್ತಷ್ಟು ಕಡಿತ ಸಂಭವ: ಗ್ರಾಹಕರಿಗೆ ಸಂತಸ

ಶುಕ್ರವಾರ, 28 ನವೆಂಬರ್ 2014 (20:03 IST)
ಗ್ರಾಹಕರಿಗೆ ಸಂತಸ ನೀಡುವ ಒಂದು ಸುದ್ದಿಯೆಂದರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಇನ್ನಷ್ಟು ಕಡಿತ ಉಂಟಾಗುವ ಸಂಭವವಿರುವುದು. ಅಂತಾರಾಷ್ಟ್ರೀಯ ಕಚ್ಚಾತೈಲದ ದರ ಬ್ಯಾರೆಲ್‌ಗೆ 72$ ಗೆ ಇಳಿದಿದ್ದು ನಾಲ್ಕು ವರ್ಷಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ದೇಶದಲ್ಲಿ ನಿಯಂತ್ರಣಮುಕ್ತಗೊಳಿಸಲಾಗಿದ್ದು, ಅದರ ಚಲನವಲನ ಮಾರುಕಟ್ಟೆ ನಿರ್ಧಾರಿತವಾಗಿದೆ. ಪೆಟ್ರೋಲ್ ದರಗಳು ದೆಹಲಿಯಲ್ಲಿ ಪ್ರಸಕ್ತ ಲೀಟರ್‌ಗೆ 65 ರೂ.ಗಳಿಂದ 60 ರೂ.ಗೆ ಕುಸಿಯುವ ಸಂಭವವಿದೆ ಎಂದು ಪ್ರಮುಖ ತೈಲ ಕಂಪನಿಯ ಅಧ್ಯಕ್ಷರು ಹೇಳಿದ್ದಾರೆ.

ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತಗೊಳಿಸದಿರಲು ನಿರ್ಧರಿಸಿರುವುದರಿಂದ ತೈಲ ಬೆಲೆಗಳು ಕುಸಿಯುತ್ತವೆ.ನವೆಂಬರ್ 2008ರಿಂದೀಚೆಗೆ ತೈಲ ದರಗಳು ತೀವ್ರ ಮಾಸಿಕ ಕುಸಿತಕ್ಕೆ ಒಳಗಾಗಿದ್ದು, ನವೆಂಬರ್‌ನಲ್ಲಿ ಶೇ. 15ರಷ್ಟು ಇಳಿಮುಖವಾಗಿದೆ. 

ವೆಬ್ದುನಿಯಾವನ್ನು ಓದಿ