ಪೆಟ್ರೋಲ್ ,ಡೀಸೆಲ್ ದರ ಲೀಟರ್‌ಗೆ 2ರೂ. ಕಡಿತ: ಗ್ರಾಹಕರಿಗೆ ಸಂತಸ

ಸೋಮವಾರ, 15 ಡಿಸೆಂಬರ್ 2014 (19:57 IST)
ಅಂತಾರಾಷ್ಟ್ರೀಯ ಕಚ್ಚಾ ತೈಲದ ದರ ಸತತವಾಗಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಮೇಲಿಂದ ಮೇಲೆ ಇಳಿಯುತ್ತಿದ್ದು,  ಇಂದು ಪೆಟ್ರೋಲ್   ಲೀಟರ್‌ಗೆ 2 ರೂ. ಮತ್ತು ಡೀಸೆಲ್  ಲೀ. 2ರೂ ಕಡಿತ ಮಾಡಲಾಗಿದೆ.

ಇದರಿಂದ ಆಹಾರ ಪದಾರ್ಥಗಳ ದರವೂ ಇಳಿಮುಖವಾಗುವುದರಿಂದ ಗ್ರಾಹಕರಿಗೆ ಸಂತಸ ಉಂಟಾಗಿದೆ. ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಸಾರ್ವಜನಿಕ ಕ್ಷೇತ್ರದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ದರವನ್ನು ಲೀಟರ್‌ಗೆ 2ರೂ.ಗೆ ದೆಹಲಿಯಲ್ಲಿ ಇಳಿಸಿದೆ.

ರಾಜ್ಯ ಲೆವಿ ಕೂಡ ಕಡಿತವಾಗಲಿದ್ದು, ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಅಂತಾರಾಷ್ಟ್ರೀಯ ದರಗಳು ಇಳಿಕೆ ಪ್ರವೃತ್ತಿಯಲ್ಲಿದ್ದು, ರೂಪಾಯಿ-ಡಾಲರ್ ವಿನಿಮಯ ದರ ಏರಿಕೆಯಾಗಿದೆ. ಇವೆರಡು ಅಂಶಗಳ ಒಟ್ಟು ಪರಿಣಾಮದಿಂದ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳಲ್ಲಿ ಕಡಿತ ಉಂಟಾಗಿದೆ ಎಂದು ಭಾರತೀಯ ತೈಲ ನಿಗಮ ಹೇಳಿಕೆಯಲ್ಲಿ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ