ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 2 ರೂ. ಡೀಸೆಲ್ 0.50 ರೂ. ಕಡಿತ

ಸೋಮವಾರ, 31 ಆಗಸ್ಟ್ 2015 (20:19 IST)
ಪೆಟ್ರೋಲ್ ದರಗಳನ್ನು ಸೋಮವಾರ ಲೀಟರ್‌ಗೆ 2 ರೂ. ಕಡಿತ ಮಾಡಲಾಗಿದೆ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ 0.50 ರೂ. ಕಡಿತವಾಗಿದೆ. ಜಾಗತಿಕ ತೈಲ ದರಗಳಲ್ಲಿ ಕುಸಿತದಿಂದ ಈ ತಿಂಗಳಲ್ಲಿ ಉಂಟಾಗಿರುವ ಮೂರನೇ ಕಡಿತ ಇದಾಗಿದೆ. ಹೊಸ ದರಗಳು ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುತ್ತದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.

ದೆಹಲಿಯಲ್ಲಿ ಪೆಟ್ರೋಲ್ ದರಗಳು ಪ್ರತಿ ಲೀಟರ್‌ಗೆ ಸ್ಥಳೀಯ ತೆರಿಗೆಗಳು ಸೇರಿದಂತೆ 2 ರೂ. ಕಡಿತವಾಗಿದೆ. ನಾಳೆಯಿಂದ ಪ್ರತಿ ಲೀಟರ್‌ಗೆ 63.20 ರೂ. ನಿಂದ 61. 20 ರೂ.ಗೆ ಇಳಿಮುಖವಾಗಲಿದೆ. 
 
ಡೀಸೆಲ್ ದರ ಪ್ರಸಕ್ತ 44.95ರಿಂದ 44. 45ರೂ.ಗೆ ಇಳಿಮುಖವಾಗಲಿದೆ. ತೈಲ ಸಂಸ್ಥೆಗಳು ಆಗಸ್ಟ್ 15ರಿಂದ ಪೆಟ್ರೋಲ್ ದರಗಳನ್ನು ಪ್ರತಿ ಲೀಟರ್‌‌ಗೆ 1.27 ರೂ. ಮತ್ತು ಡೀಸೆಲ್ ದರವನ್ನು 1.17 ರೂ. ಕಡಿತ ಮಾಡಿತ್ತು. 
 
ಅದಕ್ಕಿಂತ ಮುಂಚಿತವಾಗಿ ಪೆಟ್ರೋಲ್ ದರಗಳನ್ನು ಪ್ರತಿ ಲೀಟರ್‌ಗೆ 2.43 ರೂ. ಮತ್ತು ಡೀಸೆಲ್ ದರವನ್ನು 3.60 ರೂ.ಗೆ ಆಗಸ್ಟ್ ಒಂದರಿಂದ ಜಾರಿಯಾಗುವಂತೆ ಕಡಿತ ಮಾಡಿತ್ತು. 
 

ವೆಬ್ದುನಿಯಾವನ್ನು ಓದಿ