ಪೆಟ್ರೋಲ್ ದರದಲ್ಲಿ 31 ಪೈಸೆ, ಡೀಸೆಲ್ ದರದಲ್ಲಿ 71 ಪೈಸೆ ಇಳಿಕೆ

ಮಂಗಳವಾರ, 30 ಜೂನ್ 2015 (21:25 IST)
ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತದಿಂದಾಗಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 31 ಪೈಸೆ, ಡೀಸೆಲ್ ದರದಲ್ಲಿ 71 ಪೈಸೆ ಇಳಿಕೆಯಾಗಿದೆ.   
 
ಕಳೆದ ಮೇ ತಿಂಗಳಿನಿಂದ ಸತತ ಮೂರು ಬಾರಿ ಏರಿಕೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ, ಇದೀಗ ಇಳಿಕೆ ಕಂಡಿದೆ. 
 
ದೆಹಲಿಯಲ್ಲಿ ಪೆಟ್ರೋಲ್ ದರ ಪ್ರಸ್ತುತ 66.93 ರೂಪಾಯಿಗಳಾಗಿದ್ದು ಪ್ರತಿ ಲೀಟರ್‌ಗೆ 66.62 ಪೈಸೆಗೆ ಇಳಿಕೆಯಾಗಿದೆ. ಡೀಸೆಲ್ ದರ ಪ್ರಸ್ತುತ 50.93 ರೂಪಾಯಿಗಳಾಗಿದ್ದು ಇದೀಗ  50.22 ರೂಪಾಯಿಗಳಿಗೆ ತಲುಪಿದೆ. 
 
ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತದಿಂದಾಗಿ  ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ