ಪೆಟ್ರೋಲ್ ದರ ಲೀ.ಗೆ 49 ಪೈಸೆ, ಡೀಸೆಲ್ ದರ ಲೀ.ಗೆ 1.21 ರೂ. ಇಳಿಕೆ

ಬುಧವಾರ, 1 ಏಪ್ರಿಲ್ 2015 (12:59 IST)
ಪೆಟ್ರೋಲ್ ದರಗಳು ಗುರುವಾರ ದೆಹಲಿಯಲ್ಲಿ 49 ಪೈಸೆ ಇಳಿಮುಖವಾಗಿದ್ದು, ಡೀಸೆಲ್ ದರವು ಪ್ರತಿ ಲೀಟರ್‌ಗೆ 1.21 ರೂ.ಅಗ್ಗವಾಗಿದೆ. ಅಂತಾರಾಷ್ಟ್ರೀಯ ತೈಲದರಗಳಲ್ಲಿ ಇಳಿಕೆಯಿಂದ ಈ ಬೆಳವಣಿಗೆ ಉಂಟಾಗಿದೆ.

ಇತರೆ ಸ್ಥಳಗಳಲ್ಲಿ ರಾಜ್ಯ ತೆರಿಗೆಗಳಿಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸಲಾಗುತ್ತದೆ. ಏಪ್ರಿಲ್ 1ರ ಮಧ್ಯರಾತ್ರಿಯಿಂದ ಹೊಸ ದರಗಳು ಜಾರಿಗೆ ಬರುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 60 ರೂ.ಗಳಾಗಿದ್ದು,  ಡೀಸೆಲ್ ದರವು ಲೀ. 48. 50 ರೂ.ಗಳು.

 ಇಂಧನ ದರಗಳನ್ನು ಕಳೆದ ಬಜೆಟ್‌ನಲ್ಲಿ ಫೆ . 28ರಂದು ಹೊಂದಿಕೆಯಾಗುವಂತೆ ಪರಿಷ್ಕರಿಸಲಾಗಿತ್ತು. ಆಗ  ಪೆಟ್ರೋಲ್ ದರವನ್ನು  ಲೀ.ಗೆ 3.18ರೂ.ಗಳಿಗೆ ಏರಿಸಲಾಗಿತ್ತು ಮತ್ತು ಡೀಸೆಲ್ ದರ ಲೀ. 3.09 ಏರಿಕೆಯಾಗಿತ್ತು.  
 

ವೆಬ್ದುನಿಯಾವನ್ನು ಓದಿ