ಪೆಟ್ರೋಲ್ ದರದಲ್ಲಿ 80 ಪೈಸೆ, ಡೀಸೆಲ್ 1.30 ರೂ. ಇಳಿಕೆ

ಬುಧವಾರ, 15 ಏಪ್ರಿಲ್ 2015 (18:17 IST)
ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಪೆಟ್ರೋಲ್‌ ದರದಲ್ಲಿ 80 ಪೈಸೆ ಇಳಿಕೆಯಾಗಿದ್ದರೆ ಡೀಸೆಲ್ ದರದಲ್ಲಿ 1.30 ರೂ. ಇಳಿಕೆಯಾಗಿದೆ. ಪೆಟ್ರೋಲ್ ದರದಲ್ಲೂ ಇಳಿಕೆಯಾಗಿರುವುದರಿಂದ ವಾಹನ ಸವಾರರು ಸಂತಸ ಪಡುವಂತಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಇಳಿಕೆಯಿಂದ ಈ ತಿಂಗಳಲ್ಲಿ ಎರಡನೇ ಬಾರಿಗೆ ದರ ಇಳಿಸಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಯಾಗುತ್ತದೆ. ಅಂತಾರಾಷ್ಟ್ರೀಯ ಕಚ್ಚಾ ತೈಲದ ದರದ ತೀವ್ರ ಕುಸಿತದಿಂದಾಗಿ ಪೆಟ್ರೋಲ್, ಡೀಸೆಲ್ ದರ ಸತತವಾಗಿ ಇಳಿಯುತ್ತಿದೆ.
 
ದರ ಕಡಿತದಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 59.20 ಮತ್ತು ಡೀಸೆಲ್ ದರವು ಲೀಟರ್‌ಗೆ 47.20ಕ್ಕೆ ಇಳಿಕೆಯಾಗಲಿದೆ.  ಏಪ್ರಿಲ್ 1ರಂದು ಪೆಟ್ರೋಲ್ ದರ ಲೀಟರ್‌ಗೆ 49 ಪೈಸೆ ಮತ್ತು ಡೀಸೆಲ್ ದರವು 1.21 ರೂ. ಇಳಿಕೆಯಾಗಿತ್ತು. 

ವೆಬ್ದುನಿಯಾವನ್ನು ಓದಿ