ನಕಲಿ ಪ್ಲಾಸ್ಟಿಕ್ ಅಕ್ಕಿ ಈಗ ಚೀನಾದಿಂದ ಭಾರತಕ್ಕೆ ಲಗ್ಗೆ

ಬುಧವಾರ, 1 ಜುಲೈ 2015 (17:16 IST)
ಚೀನಾದ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಪ್ಲಾಸ್ಟಿಕ್ ಅಕ್ಕಿ ಈಗ ವಿವಿಧ ಏಷ್ಯಾದ ರಾಷ್ಟ್ರಗಳಿಗೂ ಲಗ್ಗೆ ಹಾಕಿದ್ದು, ಭಾರತ, ಇಂಡೋನೇಶಿಯಾ್ ಮತ್ತು ವಿಯೆಟ್ನಾಂನಲ್ಲಿ ಕೂಡ ನಕಲಿ ಅಕ್ಕಿ ಅಕ್ರಮವಾಗಿ ಪ್ರವೇಶಿಸಿದೆ. ಆಲೂಗಡ್ಡೆಗಳು, ಗೆಣಸುಗಳು ಮತ್ತು ಸಿಂಥೆಟಿಕ್ ರೆಸಿನ್ ಮಿಶ್ರಣದ ಮೂಲಕ ಈ ನಕಲಿ ಅಕ್ಕಿಯನ್ನು ತಯಾರಿಸಲಾಗುತ್ತಿದೆ.

ಇದು ಟೈವಾನ್, ಶಾಂಕ್ಸಿ ಮಾರುಕಟ್ಟೆಗಳಲ್ಲಿ  ಅಕ್ರಮವಾಗಿ ಮಾರಾಟವಾಗುತ್ತಿದ್ದು, ನೈಸರ್ಗಿಕ ಅಕ್ಕಿಯನ್ನು ಅಕ್ಷರಶಃ ಹೋಲುತ್ತದೆ. ಇಂತಹ ನಕಲಿ ಧಾನ್ಯಗಳ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಗೆ ಗಂಭೀರ ಹಾನಿಯಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಂತರ್ಜಾಲದಲ್ಲಿ ನಕಲಿ ಅಕ್ಕಿ ಏಷ್ಯಾದ ಅನೇಕ ಪ್ರದೇಶಗಳಲ್ಲಿ ಬಂದು ಬೀಳುತ್ತಿರುವ ಮಾಹಿತಿಗಳು ಹರಿದಾಡುತ್ತಿರುವ ನಡುವೆ ಅಧಿಕಾರಿಗಳು ಗ್ರಾಹಕರ ಭಯ ನಿವಾರಣೆಗೆ ಯತ್ನಿಸಿದ್ದಾರೆ.  

ಎವಿಎನ ವಾಡಿಕೆಯ ನಿಗಾ ಭಾಗವಾಗಿ, ಆಮದಾದ ಅಕ್ಕಿಯನ್ನು ನಮ್ಮ ಆಹಾರ ಸುರಕ್ಷತಾ ಮಾನದಂಡ ಪಾಲನೆಯಾಗಿರುವ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ನಕಲಿ ಅಕ್ಕಿ ಸಿಂಗಪುರವನ್ನು ಪ್ರವೇಶಿಸಿದೆ ಎಂದು ವದಂತಿಗಳು ಹರಡಿದ ಹಿನ್ನೆಲೆಯಲ್ಲಿ  ಅಗ್ರಿ ಫುಡ್ ಮತ್ತು ವೆಟರಿನರಿ ಪ್ರಾಧಿಕಾರದ ವಕ್ತಾರ ತಿಳಿಸಿದರು. 

 
 ಮಲೇಷ್ಯಾದ ಕೃಷಿ ಸಚಿವಾಲಯ ರೆಸಿನ್ ಲೇಪಿತ ಧಾನ್ಯಗಳ ಬಗ್ಗೆ ಯಾವುದೇ ವರದಿ ಸ್ವೀಕರಿಸಿದ್ದನ್ನು ನಿರಾಕರಿಸಿದೆ. ಮಲ್ಯೇಷ್ಯಾಗೆ ಅದು ಹೋಗಿದ್ದರೆ, ಇದು ಮಲೇಷ್ಯಾಕ್ಕೆ ಪ್ರವೇಶಿಸಿದ್ದರೆ, ದೊಡ್ಡ ಸೂಪರ್‌ಮಾರ್ಕೆಟ್‌ಗಳ ಬದಲಿಗೆ ಸಣ್ಣ ಅಂಗಡಿಗಳಲ್ಲಿ ಮಾರುತ್ತಿರಬಹುದು ಎಂದು ಹೇಳಿದೆ.
 

ವೆಬ್ದುನಿಯಾವನ್ನು ಓದಿ