ಎಲ್‌ಪಿಜಿ ಸಬ್ಸಿಡಿ ತ್ಯಜಿಸಿದ ಒಂದು ಕೋಟಿ ಜನರಿಗೆ ಪ್ರಧಾನಿ ಧನ್ಯವಾದ

ಶನಿವಾರ, 23 ಏಪ್ರಿಲ್ 2016 (19:20 IST)
ಎಲ್‌ಪಿಜಿ ಹೆಚ್ಚು ಅಗತ್ಯವಿದ್ದವರಿಗೆ ನೆರವಾಗಲು ಸ್ವಯಂಪ್ರೇರಣೆಯಿಂದ ಎಲ್‌ಪಿಜಿ ಸಬ್ಸಿಡಿಯನ್ನು ಬಿಟ್ಟುಕೊಟ್ಟ ಒಂದು ಕೋಟಿ ಪೌರರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ''ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ, ಗೀವ್ ಇಟ್ ಅಪ್'' ನತ್ತ ಅದ್ಭುತ ಕೊಡುಗೆ ನೀಡಿದ ಒಂದು ಕೋಟಿ ಪೌರರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ. ಕೊಡುವುದು ಸ್ವೀಕರಿಸುವಷ್ಟೇ ಸಂತೋಷವಾಗಿರುತ್ತದೆ. ನೀವು ಬಿಟ್ಟುಕೊಟ್ಟ ಸಬ್ಸಿಡಿ ಅಗತ್ಯವಿದ್ದವರಿಗೆ ಮುಟ್ಟುತ್ತದೆಂದು ನಾನು ಭರವಸೆ ನೀಡುತ್ತೇನೆ ಎಂದು ಪ್ರಧಾನಿ ನುಡಿದರು. 
 
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ನಿನ್ನೆ ಗೀವ್ ಇಟ್ ಅಪ್ ಅಭಿಯಾನದಡಿಯಲ್ಲಿ ಒಂದು ಕೋಟಿ ಜನರು ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದು ಸರ್ಕಾರ ಬಡವರಿಗೆ ಎಲ್‌ಪಿಜಿ ಸಂಪರ್ಕ ನೀಡಲು ಸಾಧ್ಯವಾಗುತ್ತದೆಂದು ತಿಳಿಸಿದ್ದರು. 
 
 ಬಹುತೇಕ ಗೀವ್ ಇಟ್ ಅಪ್ ಗ್ರಾಹಕರು ಮಧ್ಯಮವರ್ಗ ಕುಟುಂಬಗಳು, ಪಿಂಚಣಿದಾರರು, ಶಿಕ್ಷಕರು ಸೇರಿದ್ದು, ಅಗತ್ಯವಿದ್ದವರಿಗೆ ಕೊಡಬೇಕೆಂಬ ಕಲ್ಪನೆಯಿಂದ ಪ್ರೇರಿತರಾದವರು ಎಂದು ಹೇಳಿದ್ದರು.  ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಕರ್ನಾಟಕ ಮತ್ತು ತಮಿಳುನಾಡು ಒಟ್ಟು ಸಂಖ್ಯೆಯಲ್ಲಿ ಶೇ. 50ರಷ್ಟು ಜನರು ಸಬ್ಸಿಡಿಯನ್ನು ತ್ಯಜಿಸಿದ್ದಾರೆ. ಬಿಪಿಎಲ್ ಕುಟುಂಬಗಳಿಗೆ 60 ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ನೀಡಲಾಗಿದೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ