ನಿಮ್ಮ ಕಾರು ಡ್ರೈವಿಂಗ್ ನಿಲ್ಲಿಸಿ, ದಿನಕ್ಕೆ 1.5 ಯೂರೋ ಪಡೆಯಿರಿ: ಮಿಲನ್ ಘೋಷಣೆ

ಬುಧವಾರ, 17 ಡಿಸೆಂಬರ್ 2014 (18:09 IST)
ಮಾಲಿನ್ಯ  ಜಾಗತಿಕ ಸಮಸ್ಯೆಯಾಗಿದ್ದು, ಪ್ರತಿಯೊಂದು ರಾಷ್ಟ್ರ ಮಾಲಿನ್ಯ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಫ್ರೆಂಚ್ ಪ್ರಧಾನಮಂತ್ರಿ ದೇಶದಲ್ಲಿ ಎಲ್ಲಾ ಡೀಸೆಲ್ ಕಾರುಗಳ ಸಂಚಾರ ನಿಷೇಧಿಸುವ ಇಚ್ಛೆ ಹೊಂದಿದ್ದರೆಂದು ವರದಿಯಾಗಿತ್ತು. ಈಗ ಮಿಲನ್ ಅಧಿಕಾರಿಗಳು ಮಾಲಿನ್ಯ ನಿಯಂತ್ರಣಕ್ಕೆ ನಿಜವಾಗಲೂ ನಾವೀನ್ಯದ ಕ್ರಮವೊಂದಕ್ಕೆ ಮುಂದಾಗಿದ್ದಾರೆ. 
 
ಕೆಲವು ರಾಷ್ಟ್ರಗಳು ನಗರದಲ್ಲಿ ಕಾರುಗಳ ಸಂಚಾರಕ್ಕೆ ಅವಕಾಶ ನೀಡಲು ಶುಲ್ಕ ವಿಧಿಸಲು ಯೋಜಿಸಿದ್ದರೆ, ಮಿಲನ್ ಸರ್ಕಾರ ಮಾತ್ರ ಕಾರುಗಳನ್ನು ಡ್ರೈವ್ ಮಾಡದಿದ್ದವರಿಗೆ ಬಹುಮಾನ ನೀಡುವುದಾಗಿ ಪ್ರಕಟಿಸಿojg.. ಸರ್ಕಾರ ಸಾರ್ವಜನಿಕ ಸಾರಿಗೆ ಇಲಾಖೆ, ವಿಮಾ ಏಜನ್ಸಿ ಯೂನಿಪೋಲ್ ಮ್ತತು ಓಕ್ಟೋ ಟೆಲಿಮ್ಯಾಟಿಕ್ಸ್ ಜೊತೆ ಸಹಯೋಗದಿಂದ 'ನಿಮ್ಮ ಕಾರು ಪಾರ್ಕ್ ಮಾಡಿ, ಪಬ್ಲಿಕ್‌ನಲ್ಲಿ ನಡೆದುಹೋಗಿ'  ಹೊಸ ಅಭಿಯಾನ ಆರಂಭಿಸಿದೆ. 
 
ಅಧಿಕಾರಿಗಳು ಕಾರಿನಲ್ಲಿ ಅಳವಡಿಸಿದ ಟೆಲಿಮ್ಯಾಟಿಕ್ ವ್ಯವಸ್ಥೆ ನೆರವಿನಿಂದ ಯೂನಿಪೋಲ್ ಗ್ರಾಹಕರ ಜಾಡು ಹಿಡಿಯುತ್ತಾರೆ. ಕಾರನ್ನು ಬೆಳಿಗ್ಗೆ 7.30ರಿಂದ ರಾತ್ರಿ 7.30ರವರೆಗೆ ಕಾರನ್ನು ಪಾರ್ಕ್ ಮಾಡಿದ್ದರೆ ಆ ಕಾರಿಗೆ ಬಹುಮಾನ ಸಿಗುತ್ತದೆ.ದಿನಕ್ಕೆ 1.5 ಯೂರೋ ಅಷ್ಟೊಂದು ಬೃಹತ್ ಮೊತ್ತವಲ್ಲದಿದ್ದರೂ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣದ ಟಿಕೆಟ್ ವೆಚ್ಚಕ್ಕೆ ಸರಿದೂಗುತ್ತದೆ.

ವೆಬ್ದುನಿಯಾವನ್ನು ಓದಿ