ರೈಲ್ವೆ ಬಜೆಟ್ ಭಾಷಣದಲ್ಲಿ "ಓ ಪ್ರಭು" ಎಂದು ಉದ್ಗರಿಸಿದ ಸುರೇಶ್ ಪ್ರಭು

ಗುರುವಾರ, 26 ಫೆಬ್ರವರಿ 2015 (16:55 IST)
ರೈಲ್ವೆ ಸಚಿವ ಸುರೇಶ್ ಪ್ರಭು ತಮ್ಮ ರೈಲ್ವೆಬಜೆಟ್  ಭಾಷಣದಲ್ಲಿ 'ಓ ಪ್ರಭು' ಎಂದು ತಮ್ಮ ಹೆಸರನ್ನೇ ಉಚ್ಚರಿಸಿದಾಗ ಒಂದು ಕ್ಷಣ ಸಂಸದರು ನಗೆಗಡಲಲ್ಲಿ ಮುಳುಗಿದರು. ಅಧಿಕ ದಟ್ಟಣೆಯ ವಿಭಾಗದಲ್ಲಿ ಸಾಮರ್ಥ್ಯ ಸುಧಾರಣೆ ನಮ್ಮ ಆದ್ಯತೆಯಾಗಿತ್ತು.  

ಆದರೆ ಹೇ ಪ್ರಭು(ಓ ದೇವರೇ), ಅದು ಹೇಗೆ ಸಂಭವಿಸುತ್ತದೆಂದು ಯೋಚನೆಯಾಗಿದೆ ಎಂದು ಲೋಕಸಭೆಯಲ್ಲಿ ಸುರೇಶ್ ಪ್ರಭು ತಿಳಿಸಿದರು. ರೈಲ್ವೆ ಸಚಿವರ ಭಾಷಣದಲ್ಲಿ ಕೆಲವು ರಂಜನೀಯ ಉಲ್ಲೇಖಗಳೂ ಇದ್ದವು. ಬಜೆಟ್ ಭಾಷಣದಲ್ಲಿ ರೈಲಿನಲ್ಲಿ ಮೇಲಿನ ಬರ್ತ್‌ಗೆ ಮೆಟ್ಟಲುಗಳನ್ನು ಸುಧಾರಿಸಲಾಗುತ್ತದೆ.

ಮಧ್ಯದ ಬರ್ತ್‌ಗಳನ್ನು ಮಹಿಳೆಯರು ಮತ್ತು ನನ್ನಂತ ವಯಸ್ಸಾದ ಜನರಿಗೆ ಮೀಸಲಾಗಿಡಲಾಗುತ್ತದೆ ಎಂದು ಹೇಳಿದರು. ಇದರ ಜೊತೆಗೆ ದೆಹಲಿ ಮತ್ತು ಕೊಲ್ಕತ್ತಾ ನಡುವೆ ವೇಗದ ರೈಲಿನ ಕಾರಿಡಾರ್ ಘೋಷಿಸುತ್ತಾ, ಇದರಿಂದ ಪಶ್ಚಿಮಬಂಗಾಳದ ನನ್ನ ಸ್ನೇಹಿತರು ವೇಗವಾಗಿ ಪ್ರಯಾಣಿಸಬಹುದು ಎಂದು ನಗೆಚಟಾಕಿ ಹಾರಿಸಿದರು. 

ವೆಬ್ದುನಿಯಾವನ್ನು ಓದಿ