ಫ್ಲಿಪ್‌ಕಾರ್ಟ್‌ನಲ್ಲಿ ಕತಾರ್ ಕಂಪನಿಯಿಂದ 150 ದಶಲಕ್ಷ ಡಾಲರ್ ಹೂಡಿಕೆ

ಗುರುವಾರ, 18 ಡಿಸೆಂಬರ್ 2014 (15:55 IST)
ಕತಾರ್  ಇನ್‌ವೆಸ್ಟ್‌ಮೆಂಟ್ ಅಥಾರಿಟಿ(ಕ್ಯುಐಎ)  ಭಾರತದ ಇ-ವಾಣಿಜ್ಯ ಕಂಪನಿ ಫ್ಲಿಪ್‌ಕಾರ್ಟ್‌ನಲ್ಲಿ 150 ದಶಲಕ್ಷ ಡಾಲರ್ ಹೂಡಿಕೆ ಮಾಡಿದೆ. ಫ್ಲಿಪ್‌ಕಾರ್ಟ್ 700 ದಶಲಕ್ಷ ಡಾಲರ್ ನಿಧಿ ಸಂಗ್ರಹವನ್ನು ಬುಧವಾರ ಕೊನೆಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯದ ಸಾರ್ವಭೌಮ ನಿಧಿಗಳು ಭಾರತದ ಇ-ಕಾಮರ್ಸ್ ಕ್ಷೇತ್ರದತ್ತ ಮುಖಮಾಡಿವೆ. ಲಂಡನ್ ಹ್ಯಾರೋಡ್ಸ್ ಸ್ಟೋರ್ ಮಾಲೀಕ ಕ್ಯುಐಎ ಫ್ಲಿಪ್‌ಕಾರ್ಟ್‌ನಲ್ಲಿ ಹೂಡಿಕೆಗೆ ಸಿಂಗಾಪುರದ ಜಿಐಸಿ ಜೊತೆಗೂಡಿದೆ. 2018ಕ್ಕೆ ಏಳುಪಟ್ಟು ಬೆಳೆದು 22 ಶತಕೋಟಿ ಡಾಲರ್‌ಗೆ ಮುಟ್ಟುವುದೆಂದು  ನಿರೀಕ್ಷಿಸಲಾಗಿರುವ ಇ-ಕಾಮರ್ಸ್ ಕ್ಷೇತ್ರದಲ್ಲಿನ ಬಂಡವಾಳ ಕ್ಯುಐಎನ ಬಂಡವಾಳ ಪಟ್ಟಿಗೆ ಸೇರ್ಪಡೆಯಾಗಿದೆ.

ಕ್ಯುಐಎ ಟಿಫಾನಿ, ಬಾರ್ಸಲೇಸ್, ಕ್ರೆಡಿಟ್ ಸ್ಯೂಸ್ ಮತ್ತು ಭಾರತಿ ಏರ್ಟೆಲ್‌ನಲ್ಲಿ 1.2 ಶತಕೋಟಿ ಡಾಲರ್ ಪಾಲನ್ನು ಹೊಂದಿದೆ. ದೇಶೀಯ ಇ-ಕಾಮರ್ಸ್ ಮುಖಂಡ ಫ್ಲಿಪ್‌ಕಾರ್ಟ್ ಅಮೆಜಾನ್ ಆನ್‌ಲೈನ್ ಮಾರಾಟ ಸಂಸ್ಥೆ ಜೊತೆ ತೀವ್ರ ಪೈಪೋಟಿಯಲ್ಲಿ ತೊಡಗಿದ್ದು, ಮುಂದಿನ ವರ್ಷದೊಳಗೆ 4 ಶತಕೋಟಿ ಆದಾಯವನ್ನು ಹೊಂದುವ ನಿರೀಕ್ಷೆ ಹೊಂದಿದೆ.

ವೆಬ್ದುನಿಯಾವನ್ನು ಓದಿ