ರೆಪೊ ದರ ಕಡಿತ: ಏಪ್ರಿಲ್‌ನಿಂದ ಗೃಹಸಾಲದ ಇಎಂಐ ಇಳಿಕೆ ಸಾಧ್ಯತೆ

ಗುರುವಾರ, 5 ಮಾರ್ಚ್ 2015 (10:40 IST)
ಕೇಂದ್ರ ಬಜೆಟ್ ಮಂಡನೆಯಾಗಿ ಒಂದು ವಾರದೊಳಗೆ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ರೆಪೊ ದರವನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿದ್ದರೂ ಮನೆ ಸಾಲ ಮತ್ತು ವಾಹನ ಸಾಲ ತೆಗೆದುಕೊಂಡ ಗ್ರಾಹಕರ ಮೇಲಿನ ಹೊರೆ ಏಪ್ರಿಲ್‌ನಲ್ಲಿ ಮಾತ್ರ ಇಳಿಯಲಿದೆ. ಆರ್‌ಬಿಐ ಇದು ಎರಡನೇ ಬಾರಿ ರೆಪೊ ದರ ಕಡಿತ ಮಾಡುತ್ತಿರುವುದು.

ಕಳೆದ ಬಾರಿ  45 ಬ್ಯಾಂಕ್‌ಗಳ ಪೈಕಿ  3 ಬ್ಯಾಂಕ್‌ಗಳಾದ ಯೂನಿಯನ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಮತ್ತು ಕರೂರು ವೈಶ್ಯ ಬ್ಯಾಂಕ್ ಬೆಂಚ್‌ಮಾರ್ಕ್ ದರವನ್ನು  ಕಡಿತ ಮಾಡಿದ್ದರೆ ಉಳಿದ ಬ್ಯಾಂಕ್‌ಗಳು ಲಾಭವನ್ನು ತಾವೇ ಉಳಿಸಿಕೊಂಡಿದ್ದವು. ಬ್ಯಾಂಕ್‌ಗಳು ವಸೂಲಾಗದ ಸಾಲಗಳ ಕಾರಣ ಗಳಿಕೆ ಒತ್ತಡವನ್ನು ಎದುರಿಸುವುದರಿಂದ ತಕ್ಷಣವೇ ಬಡ್ಡಿ ದರ ಕಡಿತಕ್ಕೆ ನಿರಾಕರಿಸಿವೆ.ಬಡ್ಡಿ ದರ ಕಡಿತವು ಮಾರ್ಚ್‌ನಲ್ಲಿ ಸಂಭವಿಸುವುದಿಲ್ಲ.

. ಆದರೆ ಹೊಸ ಹಣಕಾಸು ವರ್ಷದಲ್ಲಿ ಉಂಟಾಗುತ್ತದೆ ಎಂದು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ತಿಳಿಸಿದರು. ವರ್ಷಾಂತ್ಯದಲ್ಲಿ ಠೇವಣಿ ದರದಲ್ಲಿ ಕಡಿತ ಮಾಡುವುದು ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾಲದರದಲ್ಲಿ ಕಡಿತಮಾಡುವುದು ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ