ಹಣದುಬ್ಬರ ವಿವರಿಸಲು ದೋಸೆ ಆರ್ಥಿಕತೆಯ ವಿಷಯ ಹೇಳಿದ ರಘುರಾಮ್ ರಾಜನ್

ಭಾನುವಾರ, 31 ಜನವರಿ 2016 (17:06 IST)
ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರು ಹಣದುಬ್ಬರ ಮೌನ ಹಂತಕ ಎಂದು ದೋಸೆ  ಎಕನಾಮಿಕ್ಸ್ ತೋರಿಸುತ್ತದೆ ಎಂದು ಪಿಂಚಣಿದಾರನ ದೋಸೆ ಖರೀದಿಯ ಕಥೆಯನ್ನು ಹೇಳಿದರು. 
 
ಪಿಂಚಣಿದಾರ ತಮ್ಮ ಉಳಿತಾಯಕ್ಕೆ ಕಡಿಮೆ ಬಡ್ಡಿ ಸಿಕ್ಕಿದರೂ ಕೂಡ ಹಣದುಬ್ಬರ ತಗ್ಗಿರುವುದರಿಂದ ಹೊಟೆಲ್‌ನಲ್ಲಿ ಹೆಚ್ಚು ದೋಸೆಗಳನ್ನು ಖರೀದಿಸಬಹುದು ಎಂದು ರಾಜನ್  ಪಿಂಚಣಿದಾರ ದೋಸೆ ಖರೀದಿಸುವುದನ್ನು ಉದಾಹರಣೆಯಾಗಿ ನೀಡಿದರು.
 
ನಿವೃತ್ತಿದಾರರಿಂದ ತಮಗೆ ಆಗಾಗೆ ಪತ್ರಗಳು ತಮಗೆ ಸಿಗುತ್ತವೆ. ಒಂದು ವರ್ಷದ ನಿಖರ ಠೇವಣಿಗೆ ತಮಗೆ ಮುಂಚೆ ಶೇ. 10ರಷ್ಟು ಬಡ್ಡಿ ಸಿಗುತ್ತಿತ್ತು. ಈಗ ಶೇ. 8ರಷ್ಟು ಬಡ್ಡಿ ಮಾತ್ರ ಸಿಗುತ್ತಿದೆ. ಬ್ಯಾಂಕುಗಳಿಗೆ ಹೆಚ್ಚು ಬಡ್ಡಿ ನೀಡುವಂತೆ ಸೂಚಿಸಿ, ಇಲ್ಲದಿದ್ದರೆ ನಮ್ಮ ಜೀವನ ಕಷ್ಟವಾಗುತ್ತದೆ ಎಂದು ಪತ್ರ ಬರೆಯುತ್ತಾರೆ. 
 
ಆದಾಗ್ಯೂ, ನಿವೃತ್ತಿದಾರ ತಮ್ಮ ಹಣಕ್ಕೆ ಹೆಚ್ಚು ಪ್ರತಿಫಲ ಪಡೆಯುತ್ತಾರೆಂದು ಅರಿಯುವುದಿಲ್ಲ. ಅವರು ಬರೀ ಬಡ್ಡಿಯ ಮೇಲೆ ತಮ್ಮ ಗಮನಹರಿಸುತ್ತಾರೆ. ಆದರೆ ಹಣದುಬ್ಬರ ಶೇ. 10ರಿಂದ 5.5ಕ್ಕೆ ತಗ್ಗಿರುವುದರಿಂದ ಸಿಗುವ ಲಾಭದ ಬಗ್ಗೆ ಗಮನಹರಿಸುವುದಿಲ್ಲ ಎಂದು ರಾಜನ್ ಹೇಳಿದರು. 
 
ಪಿಂಚಣಿದಾರ ದೋಸೆಗಳನ್ನು ಖರೀದಿಸಲು ಬಯಸುತ್ತಾರೆಂದು ಭಾವಿಸೋಣ. ಆರಂಭದಲ್ಲಿ ಅವು ಪ್ರತಿ ದೋಸೆಗೆ 50 ಪೈಸೆಗಳಿತ್ತು. ಅವರು 1,00,000 ರೂ. ಉಳಿತಾಯ ಮಾಡಿದ್ದಾರೆಂದು ಭಾವಿಸೋಣ. ಆ ಹಣದಲ್ಲಿ ಅವರು 2000 ದೋಸೆಗಳನ್ನು ಖರೀದಿಸಬಹುದು. ಆದರೆ ಅದನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚು ಹಣ ಬಯಸಬಹುದು.
 
 
ಶೇ. 10ರ ಬಡ್ಡಿ ದರದಲ್ಲಿ ಒಂದು ವರ್ಷಕ್ಕೆ 10,000 ರೂ. ಪ್ಲಸ್ ಅವರ ಅಸಲು ಸಿಗುತ್ತದೆ.ಶೇ. 8ರ ಬಡ್ಡಿದರದಲ್ಲಿ ಅವರಿಗೆ 8000 ರೂ. ಸಿಗುತ್ತದೆ. ಆದರೆ ದೋಸೆ ದರವು ಶೇ. 5.5ರಷ್ಟು ಏರಿಕೆಯಾಗಿ ಪ್ರತಿ ದೋಸೆ ದರ 52.75 ಪೈಸೆಗಳಾಗುತ್ತವೆ. ಆ ಹಣದಲ್ಲಿ ಅವರು 152 ದೋಸೆ ಖರೀದಿಸಬಹುದು. ಕಡಿಮೆ ಬಡ್ಡಿ ದರದಿಂದ ಅವರು ಕಡಿಮೆ ದೋಸೆ ಖರೀದಿಸಬೇಕಾಗುತ್ತದೆ. ಆದರೆ ಸ್ವಲ್ಪ ತಾಳಿ. ಅವರಿಗೆ ಅಸಲು ಕೂಡ ವಾಪಸ್ ಸಿಗುವುದರಿಂದ ಅದನ್ನು ಹಣದುಬ್ಬರಕ್ಕೆ ಹೊಂದಾಣಿಕೆ ಮಾಡಬೇಕಾಗುತ್ತದೆ.

ಅಧಿಕ ಹಣದುಬ್ಬರದಲ್ಲಿ  1818 ದೋಸೆಗಳು ಸಿಕ್ಕಿದರೆ, ಕಡಿಮೆ ಹಣದುಬ್ಬರದಲ್ಲಿ 1896 ದೋಸೆಗಳು ಸಿಗುತ್ತವೆ. ಅಧಿಕ ಹಣದುಬ್ಬರದಲ್ಲಿ ಅಸಲು ಮತ್ತು ಬಡ್ಡಿ ಸೇರಿದರೆ ಅದರ ಮೌಲ್ಯಕ್ಕೆ 2000 ದೋಸೆಗಳು ಸಿಕ್ಕಿದರೆ, . ಕಡಿಮೆ ಹಣದುಬ್ಬರದಲ್ಲಿ ಅವರಿಗೆ 2048 ದೋಸೆಗಳು ಸಿಗುತ್ತವೆ. ಕಡಿಮೆ ಹಣದುಬ್ಬರ ಅವಧಿಯಲ್ಲಿ ದೋಸೆಗಳಿಗೆ ಸಂಬಂಧಿಸಿದ ಅವರು ಶೇ. 2.5ರಷ್ಟು ಲಾಭ ಗಳಿಸುತ್ತಾರೆ ಎಂದು ರಾಜನ್ ಹೇಳಿದರು. 
.

ವೆಬ್ದುನಿಯಾವನ್ನು ಓದಿ