ಮೆಟ್ರೋನಗರಗಳ ನಡುವೆ ರೈಲುಗಳ ವೇಗ ಗಂಟೆಗೆ 200 ಕಿಮೀ

ಗುರುವಾರ, 26 ಫೆಬ್ರವರಿ 2015 (16:21 IST)
9 ಆಯ್ದ ರೈಲ್ವೆ ಕಾರಿಡಾರ್‌ಗಳಲ್ಲಿ ಪ್ರಮುಖ ಮೆಟ್ರೋ ನಗರಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ರೈಲುಗಳ ವೇಗವನ್ನು ಗಂಟೆಗೆ 200 ಕಿಮೀ ಹೆಚ್ಚಿಸುವ ಮೂಲಕ ಪ್ರಯಾಣದ ಕಾಲಾವಧಿಯನ್ನು ತಗ್ಗಿಸಲಾಗುತ್ತದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಕಟಿಸಿದ್ದಾರೆ.

9 ರೈಲ್ವೆ ಕಾರಿಡಾರ್‌ಗಳಲ್ಲಿ ವೇಗವನ್ನು ಪ್ರಸಕ್ತ ಗಂಟೆಗೆ 110 ಮತ್ತು 130 ಕಿಮೀನಿಂದ 160-200 ಕಿಮೀಗೆ ಕ್ರಮವಾಗಿ ಏರಿಸಲಾಗುತ್ತದೆ. ಇದರಿಂದ ದೆಹಲಿ-ಕೊಲ್ಕತ್ತಾ ಮತ್ತು ದೆಹಲಿ-ಮುಂಬೈ ನಡುವೆ ಪ್ರಯಾಣ ಒಂದು ರಾತ್ರಿಯಲ್ಲಿ ಮುಗಿಯಲಿದೆ ಎಂದು ಚೊಚ್ಚಲ ಬಜೆಟ್ ಮಂಡಿಸುತ್ತಾ ಸಚಿವರು ಹೇಳಿದರು.

ಹಳಿಗಳನ್ನು ಮೇಲ್ದರ್ಜೆಗೇರಿಸುವುದು, ಬೋಗಿಗಳನ್ನು ಹೆಚ್ಚಿನ ಮಟ್ಟಕ್ಕೆ ಸುಧಾರಣೆ ಮಾಡುವುದು ಮತ್ತು ಹಳಿ ನಿಗಾ ಮತ್ತು ನಿರ್ವಹಣೆಗೆ ಸುಧಾರಿತ ವಿಧಾನಗಳನ್ನು ಅಳವಡಿಸುವುದು, ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಅತೀ ವೇಗದ ರೈಲು ಮುಂತಾದ ವಿಶೇಷ ಯೋಜನೆಗಳ ಅನುಷ್ಠಾನವನ್ನು ಹೆಚ್ಚು ಹುರುಪಿನಿಂದ ಮಾಡಲಾಗುತ್ತದೆ ಎಂದು ಪ್ರಭು ನುಡಿದರು.

ವೆಬ್ದುನಿಯಾವನ್ನು ಓದಿ