ರೈಲ್ವೆ ಬಜೆಟ್‌ನಲ್ಲಿ ರೈಲು ಸುರಕ್ಷತೆಗೆ ಆದ್ಯತೆ

ಮಂಗಳವಾರ, 8 ಜುಲೈ 2014 (12:10 IST)
ರೈಲ್ವೆ ಸಚಿವಾಲಯ ಇಂದಿನ ರೈಲು ಬಜೆಟ್‌‌ನಲ್ಲಿ ಯಾತ್ರಿಗಳ ಸುರಕ್ಷತೆ ಹೆಚ್ಚಿಸಲು ಹಳಿಗಳ ಜೊತೆಗೆ ಎಕ್ಸ್‌‌‌-ರೆ ಪ್ರಣಾಳಿಕೆ ಪ್ರಾರಂಭದ ಪ್ರಸ್ಥಾವನೆಯ ಸಾಧ್ಯತೆಗಳಿವೆ. ಇದಕ್ಕಾಗಿ ರೈಲುಗಳಲ್ಲಿ ಕೆಟ್ಟುಹೊದ ಬಿಡಿಭಾಗಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ. 
 
ಧೀರ್ಘಕಾಲದಿಂದ ನೆನೆಗುದಿಯಲ್ಲಿರುವ ಆರ್‌ಪಿಐ ಸೈನಿಕರಿಗಾಗಿ ಹೊಸ ಶೈಕ್ಷಣಿಕ ಅಕಾಡೆಮಿ ಪ್ರಸ್ಥಾವನೆ ಕೂಡ ರೈಲು ಬಜೆಟ್‌‌ 2014-15ರಲ್ಲಿ ಇರುವ ಸಾಧ್ಯತೆಗಳಿವೆ. 
 
ರೈಲ್ವೆ ಮೂಲಗಳ ಪ್ರಕಾರ ಟ್ರ್ಯಾಕ್‌ಸಾಯಿಡ್‌‌ ಎಕ್ಸ್‌-ರೆ ಸಿಸ್ಟಮ್‌ ಉಪಯುಕ್ತ ಸ್ಥಾನಗಳಲ್ಲಿ ಹಳಿಗಳ ಜೊತೆಗೆ ಸ್ಥಾಪನೆ ಮಾಡುವ ಸಾಧ್ಯತೆಗಳಿವೆ. ಇದರಿಂದ ಇಂಜಿನ್ , ಕೋಚ್‌‌ ಮತ್ತು ಬೋಗಿಗಳು ಬಿಡಿಬಾಗಗಳಲ್ಲಿನ ತೊಂದರೆ ಕಂಡು ಬರುತ್ತವೆ. 
 
ಈ ಎಕ್ಸ್‌‌-ರೆ ಪ್ರಣಾಳಿಕೆ ಬಿಯರಿಂಗ್‌ , ಗಾಲಿಗಳು ಮತ್ತು ಬ್ರೆಕ್‌‌ ಡಿಸ್ಕ್‌‌ನ ಅತ್ಯಧಿಕವಾಗಿ ಬಿಸಿಯಾಗಿರುವುದು ಕೂಡ ಪತ್ತೆ ಹಚ್ಚುತ್ತದೆ. 
 
ರೈಲ್ವೆ ಸಚಿವ ಸದಾನಂದ ಗೌಡ ರೈಲ್ವೆ ಸುರಕ್ಷತೆಯ ಸುಧಾರಣೆಗೆ ಸಂಬಂಧಿಸಿದ ಕಾಕೋಡಕರ್‌‌ ಸಮಿತಿ ಶಿಫಾರಸ್ಸು ಜಾರಿಗೆ ತರುವ ಸಾಧ್ಯತೆ ಕೂಡ ಇದೆ. ಮಾನವ ರಹಿತ ಕ್ರಾಸಿಂಗ್‌ ಮುಕ್ತಾಯಗೊಳಿಸುವ ಶೀಪಾರಸ್ಸು ಕೂಡ ಇದರಲ್ಲಿದೆ. ಸದಾನಂದ ಗೌಡರ ಈ ಬಜೆಟ್‌‌ನಲ್ಲಿ ಈ ವಿಷಯ ಕೂಡಾ ಪ್ರಸ್ಥಾವವಾಗುವ ಸಾಧ್ಯತೆಗಳಿವೆ. 
 
ದೇಶದಲ್ಲಿ 12,000 ಮಾನವ ರಹಿತ ಕ್ರಾಸಿಂಗ್‌ಗಳಿವೆ. ಇದರಿಂದ ಹೆಚ್ಚು ರೈಲು ದುರ್ಘಟನೆಗಳು ಆಗುತ್ತಿವೆ.  
 
ಮಂಜಿನಿಂದ ರೈಲು ಪ್ರಯಾಣದಲ್ಲಿ ಕಷ್ಟ ಮತ್ತು ವಿಳಂಬವಾಗುತ್ತದೆ. ಈ ಮಂಜು ತುಂಬಿದ ವಾತಾವರಣದಲ್ಲಿ ಕೂಡ ರೈಲು ಓಡಿಸುವ ಹೊಸ ಆಧುನಿಕ ಉಪಕರಣ ಬಳಸುವ ಸಾಧ್ಯತೆಗಳಿವೆ. ಉತ್ತರ ಭಾರತದಲ್ಲಿ ಈ ಮಂಜಿನ ಕಾರಣ ರೈಲು ಪ್ರಯಾಣದಲ್ಲಿ ವಿಳಂಬವಾಗುತ್ತದೆ.


 

ವೆಬ್ದುನಿಯಾವನ್ನು ಓದಿ