ರೈಲ್ವೆ ಬಜೆಟ್: ಕ್ಷಣ, ಕ್ಷಣದ ಮಾಹಿತಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಗುರುವಾರ, 26 ಫೆಬ್ರವರಿ 2015 (11:36 IST)
ನವದೆಹಲಿ: ರೈಲ್ವೆ ಸಚಿವ ಸುರೇಶ್ ಪ್ರಭು ಇಂದು ಮಧ್ಯಾಹ್ನ 12 ಗಂಟೆಗೆ ರೈಲ್ವೆ ಬಜೆಟ್ ಮಂಡನೆ ಸಲುವಾಗಿ ತಮ್ಮ ನಿವಾಸದಿಂದ ಹೊರಟಿದ್ದು, ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ಇಂದು 2015-16ನೇ ಸಾಲಿನ ಚೊಚ್ಚಲ ರೈಲ್ವೆ ಬಜೆಟ್ ಸುರೇಶ್ ಪ್ರಭು ಮಂಡಿಸಲಿದ್ದು, ಹಿಂದಿನ ಯೋಜನೆಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.



ರೈಲ್ವೆ ಸಚಿವ ಸುರೇಶ್ ಪ್ರಭು 2015-16ನೇ ಸಾಲಿನ ರೈಲ್ವೆ ಬಜೆಟ್  ಮಂಡನೆ ಮಾಡಿದರು.  ಬಜೆಟ್ ಮಂಡಿಸಲು ಅವಕಾಶ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆ ಸೂಚಿಸಿದರು. ದೇಶದ ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದರು.

ಸ್ವತಂತ್ರ ಸಿಕ್ಕು 6 ದಶಕಗಳು ಕಳೆದರೂ ರೈಲ್ವೆಯಲ್ಲಿ ನಿರೀಕ್ಷಿತ ಮಟ್ಟದ ಸುಧಾರಣೆ  ಕಂಡುಬಂದಿಲ್ಲ  ಎಂದು ಸುರೇಶ್ ಪ್ರಭು ತಿಳಿಸಿದರು.  ಗೂಡ್ಸ್ ರೈಲುಗಳು ಸೇರಿದಂತೆ ಸಾಮಾನ್ಯ ರೈಲುಗಳು ಗಂಟೆಗೆ 25 ಕಿಮೀಗಿಂತ ಹೆಚ್ಚು ವೇಗದಲ್ಲಿ ಸಂಚರಿಸಲು ಸಾಧ್ಯವಾಗ್ತಿಲ್ಲ ಎಂದು ಸಚವರು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಭಾರೀ ಸುಧಾರಣೆ ಕಾಣಲಿದೆ ಎಂದು ಭರವಸೆ ನೀಡಿದರು. 

ಈಗ ಭಾರತೀಯ ರೈಲುಗಳಲ್ಲಿ 2.1 ಕೋಟಿ ಜನರು ಪ್ರಯಾಣಿಸುತ್ತಾರೆ. ಇದನ್ನು 3 ಕೋಟಿಗೆ ಹೆಚ್ಚಿಸುವುದು ನಮ್ಮ ಗುರಿಯಾಗಿದೆ. 

ಮುಂದಿನ ಐದು ವರ್ಷಗಳಲ್ಲಿ ರೈಲುಗಳ ಸಾಮರ್ಥ್ಯ, ವೇಗ ಹೆಚ್ಚಿಸುತ್ತೇವೆ.  ರೈಲಿನಲ್ಲಿ ಸಕಲ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದ್ದೇವೆ. ರೈಲ್ವೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.  ರೈಲಿನ ಟೈಂಟೇಬಲ್‌ನಲ್ಲಿ ಬದಲಾವಣೆ ತರಲಾಗುತ್ತದೆ. ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ ಜಾರಿಯಾಗಲಿದೆ. ಆದಾಯ ತರುವಂತಹ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಸಚಿವರು ಹೇಳಿದರು. 

 ರೈಲ್ವೆ ಬಜೆಟ್ ಮಂಡನೆಯ ಮುಖ್ಯಾಂಶಗಳು ಕೆಳಗಿವೆ: 
 



 

ವೆಬ್ದುನಿಯಾವನ್ನು ಓದಿ