ದುಬಾರಿಯಾಗಲಿದೆ ಪ್ಲಾಟ್‌ಫಾರ್ಮ್ ಟಿಕೆಟ್

ಬುಧವಾರ, 18 ಮಾರ್ಚ್ 2015 (10:38 IST)
ರೈಲ್ವೆ ಇಲಾಖೆ ಪ್ಲಾಟ್‌ಫಾರ್ಮ್ ಟಿಕೆಟ್‌ನ ಬೆಲೆಯನ್ನು  ಎಪ್ರೀಲ್ 1 ರಿಂದ ದ್ವಿಗುಣಗೊಳಿಸುತ್ತಿದೆ. ಈ ಮೂಲಕ 5 ರೂಪಾಯಿದ್ದ ಟಿಕೆಟ್ ಬೆಲೆ 10 ರೂಪಾಯಿಗೇರಲಿದೆ. 
ಅಲ್ಲದೇ ಸೀಜನ್‌ನಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಬೆಲೆಯನ್ನು ಮತ್ತಷ್ಟು ಏರಿಕೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಪ್ಲಾಟ್‌ಫಾರ್ಮ್‌ನಲ್ಲಿ ಅನವಶ್ಯಕ ಜನದಟ್ಟಣೆಯನ್ನು ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. 
 
ರೈಲ್ವೆ ಅಧಿಕಾರಿಗಳ ಪ್ರಕಾರ  ಪ್ಲಾಟ್‌ಫಾರ್ಮ್  ಟಿಕೆಟ್ ಬೆಲೆಯನ್ನು ಏರಿಸುವುದರ ಕುರಿತು ಇಲ್ಲಿಯವರೆಗೂ ಯಾವ ಆದೇಶವೂ ಬಂದಿಲ್ಲ. ಆದರೆ ಎಪ್ರೀಲ್ 1 ರಿಂದ ಟಿಕೆಟ್ ಬೆಲೆಯನ್ನು ಹೆಚ್ಚಿಸುವುದು ಬಹುತೇಕ ಖಚಿತವಾಗಿದೆ. 

ವೆಬ್ದುನಿಯಾವನ್ನು ಓದಿ