ಲಾತೂರ್ ಜಿಲ್ಲಾಡಳಿತಕ್ಕೆ ಕಳಿಸಿದ್ದ 4 ಕೋಟಿ ರೂಪಾಯಿ ಬಿಲ್ ವಾಪಸ್: ರೈಲ್ವೆ ಇಲಾಖೆ

ಶನಿವಾರ, 14 ಮೇ 2016 (11:05 IST)
ನವದೆಹಲಿ: ಬರ ಪರಿಸ್ಥಿತಿಯಿಂದ ತತ್ತರಿಸಿದ ಮಹಾರಾಷ್ಟ್ರದ ಲಾತೂರ್ ಪ್ರದೇಶಕ್ಕೆ ರೈಲು ಮೂಲಕ ನೀರು ಸರಬರಾಜು ಮಾಡಿದ್ದ 4 ಕೋಟಿ ರೂಪಾಯಿ ಬಿಲ್‌ನ್ನು ಕೇಂದ್ರ ರೈಲ್ವೆ ಇಲಾಖೆ ವಾಪಸ್ ಪಡೆದಿದೆ.
ಲಾತೂರ್ ಜಿಲ್ಲಾಧಿಕಾರಿಗೆ ನೀಡಿದ್ದ 4 ಕೋಟಿ ರೂಪಾಯಿ ಬಿಲ್‌ನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ವಾಪಸ್ ಪಡೆದಿದ್ದು, ಬಿಲ್ ಕಳಿಸಿದ್ದಕ್ಕೆ ವಿವರಣೆ ನೀಡಿದ್ದಾರೆ. ಬರ ಪೀಡಿತ ಲಾತೂರ್ ಪ್ರದೇಶಕ್ಕೆ ರೈಲು ಮೂಲಕ ನೀರು ಸರಬರಾಜು ಮಾಡಿದ್ದಕ್ಕೆ ವೆಚ್ಚವಾದ ಹಣದ ಕುರಿತು ಲಾತೂರ್ ಜಿಲ್ಲಾಡಳಿತ ಮಾಹಿತಿ ಕೇಳಿದ್ದ ಹಿನ್ನೆಲೆ 4 ಕೋಟಿ ರೂಪಾಯಿ ವೆಚ್ಚವಾಗಿದೆ ಎಂಬ ಸ್ಪಷ್ಟನೆ ನೀಡಿದ್ದಾರೆ.
 
ಭೀಕರ ಬರ ಪರಿಸ್ಥಿತಿಯಿಂದ ತತ್ತರಿಸಿದ ಮಹಾರಾಷ್ಟ್ರದ ಲಾತೂರ್ ಪ್ರದೇಶಕ್ಕೆ ರೈಲು ಮೂಲಕ 6.20 ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಸರಬರಾಜು ಮಾಡಲಾಗಿದ್ದು, ಇದಕ್ಕೆ 4 ಕೋಟಿ ರೂಪಾಯಿ ಬಿಲ್ ಕಳಿಸಿಕೊಟ್ಟಿದ್ದ ರೈಲ್ವೆ ಇಲಾಖೆ ವ್ಯವಸ್ಥಾಪಕ ಎಸ್.ಕೆ.ಸೂದ್, ಲಾತೂರ್ ಜಿಲ್ಲಾಡಳಿತ ಮಾಹಿತಿ ಕೇಳಿದ್ದ ಹಿನ್ನೆಲೆಯಲ್ಲಿ ಬಿಲ್ ಕಳಿಸಿದ್ದೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ