ಟೂ ಮಿನಿಟ್ ನೂಡಲ್ಸ್ ಎಂಬ ಸಾಲಿನೊಂದಿಗೆ ಸ್ವಿಸ್ ದೈತ್ಯ ನೆಸ್ಲೆ ಕಂಪನಿಯು ಮ್ಯಾಗಿಯಲ್ಲಿ ಹೆಚ್ಚುವರಿ ಸೀಸ ಮತ್ತು ರುಚಿ ಹೆಚ್ಚಿಸುವ ಎಂಎಸ್ಜಿ ಇದ್ದಿದ್ದರಿಂದ ಮಾರಾಟ ನಿಷೇಧಿಸಲಾಗಿದೆ. ಮುಂಬೈ ಹೈಕೋರ್ಟ್ನಲ್ಲಿ ಕಂಪನಿಯು ಈ ಆದೇಶವನ್ನು ಪ್ರಶ್ನಿಸಿದ್ದು, ಈ ಆದೇಶವನ್ನು ರದ್ದು ಮಾಡಿ ಹೊಸ ಪರೀಕ್ಷೆಗೆ ಕೋರ್ಟ್ ಆದೇಶಿಸಿದೆ.
ಡಿಸೆಂಬರ್ನಲ್ಲಿ ಉತ್ಪನ್ನಕ್ಕೆ ಮರುಚಾಲನೆ ನೀಡಲು ನೆಸ್ಲೆ ಎದುರುನೋಡುತ್ತಿದೆ.
ನಾವು ಅಕ್ಟೋಬರ್ 15ರಂದು ಪತಂಜಲಿ ನೂಡಲ್ಸ್ ಬಿಡುಗಡೆ ಮಾಡುತ್ತೇವೆ. ಇದನ್ನು ಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲಾಗಿದ್ದು, ಬೇರೆ ಕಂಪನಿಯ ನೂಡಲ್ಸ್ ರೀತಿಯಲ್ಲಿ ಮೈದಾದಿಂದ ತಯಾರಿಸಿ ಶೇ. 10ರಷ್ಟು ಮಾತ್ರ ಗೋದಿ ಹಿಟ್ಟನ್ನು ಹೊಂದಿಲ್ಲ ಎಂದು ರಾಮದೇವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.