ಟಾಟಾ ಮೋಟಾರ್ಸ್ ಅಧೀನ ಸಂಸ್ಥೆ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಮತ್ತಷ್ಟು ವಿಶೇಷಗಳೊಂದಿಗೆ ರೇಂಜ್ ರೋವರ್ ಇವಾಕ್ಯೂ ಹೊರತಂದಿದೆ. ಇದರ ಬೆಲೆ ರೂ.49.10 ರಿಂದ 67.90 ಲಕ್ಷಗಳು (ಎಕ್ಸ್ ಶೋರೂಂ ದೆಹಲಿ ಬೆಲೆ) ಎಂದು ಕಂಪನಿ ಹೇಳಿದೆ.
ಈ ರೋವರ್ ವಾಹನ ಆರು ವಿಧಗಳಲ್ಲಿ ಲಭ್ಯವಾಗಲಿದೆ. ದೇಶೀಯ ಮಾರುಕಟ್ಟೆಗೆ ಇಂಜಿನ್, ಆಕ್ಸಲ್ ಎರಡೂ ಇರುವ ಪವರ್ ಟ್ರೈನ್ ತಂತ್ರಜ್ಞಾನವನ್ನು ಹೊಂದಿರುವ ಮೊದಲ ಲ್ಯಾಂಡ್ ರೋವರ್ ಇದು ಎಂದು ತಿಳಿಸಿದೆ.
2017ರ ಮಾಡೆಲ್ ಆಗಿರುವ ಈ ಕಾರು 2.0 ಲೀಟರ್ ಸಾಮರ್ಥ್ಯದ ಇಂಜಿನಿಯಮ್ ಡೀಸಲ್ ಇಂಜಿನನ್ನು ಅಳವಡಿಸಿದ್ದಾರೆ. ದೇಶೀಯ ಮಾರುಕಟ್ಟೆಗೆ ಮೊದಲ ಸಲ ಬಿಡುಗಡೆ ಮಾಡಿದಂದಿನಿಂದ ರೇಂಜ್ ರೋವರ್ ಎವಾಕ್ಯೂ ವಾಹನಕ್ಕೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ ಎಂದು ಜೆಎಲ್ಆರ್ ಇಂಡಿಯಾ ಅಧ್ಯಕ್ಷ ರೋಹಿತ್ ಸೂರಿ ವಿವರ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.