ಬಡ್ಡಿ ದರ ಕಡಿತ ಬ್ಯಾಂಕ್‍‌ಗಳಿಂದ ಗ್ರಾಹಕರಿಗೆ ವರ್ಗಾವಣೆ: ಆರ್‌ಬಿಐ ಆಶಯ

ಗುರುವಾರ, 8 ಅಕ್ಟೋಬರ್ 2015 (17:17 IST)
ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡ್ಡಿದರ ಕಡಿತದ ಸೌಲಭ್ಯವನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆಂದು ಆರ್‌ಬಿಐ ಡೆಪ್ಯೂಟಿ ಗವರ್ನರ್ ಎಚ್.ಆರ್. ಖಾನ್ ಆಶಾವಾದ ವ್ಯಕ್ತಪಡಿಸಿದ್ದಾರೆ.  ಆರ್‌ಬಿಐ ತನ್ನ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ  ಬೆಂಚ್‌ಮಾರ್ಕ್ ಅಲ್ಪಕಾಲೀನ ಸಾಲ(ರೆಪೋ) ದರವನ್ನು 0.50%ರಷ್ಟು ಕಡಿತ ಮಾಡಿದ್ದು, ಬ್ಯಾಂಕ್‌ಗಳು ತಮ್ಮ ಸಂಪೂರ್ಣ ದರ ಕಡಿತದ ಅನುಕೂಲವನ್ನು ಗ್ರಾಹಕರಿಗೆ ಇನ್ನೂ ವರ್ಗಾಯಿಸಿಲ್ಲ.

 ಬಹುತೇಕ ಬ್ಯಾಂಕ್‌ಗಳು ಬೆಂಚ್‌ಮಾರ್ಕ್ ಸಾಲದ ದರವನ್ನು 0.25% ಕಡಿತಮಾಡಿವೆ. ಎಸ್‌ಬಿಐ ಮಾತ್ರ ಸಾಲದ ಬಡ್ಡಿದರವನ್ನು  0.40% ಕಡಿತಮಾಡಿದೆ. 

ಎಲೆಕ್ಟ್ರಾನಿಕ್ ಪಾವತಿಗಳ ಮೇಲೆ ಶುಲ್ಕಗಳನ್ನು ಹೇರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ,ಈ ಕುರಿತು ಕ್ಯಾಬಿನೆಟ್ ಟಿಪ್ಪಣಿ ಮಂಡಿಸಲಾಗಿದೆ. ಕೆಲವು ಸಲಹೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ಹೇಳಿದ ಅವರು ಇ-ಪಾವತಿಗಳಿಗೆ ಕನ್ವೀನಿಯೆನ್ಸ್ ಶುಲ್ಕವನ್ನು ರದ್ದು ಮಾಡಲು ಯೋಚಿಸಲಾಗುತ್ತಿದೆಯೆಂದು ಹೇಳಿದರು.

ವೆಬ್ದುನಿಯಾವನ್ನು ಓದಿ