ಕಾರ್ಪೊರೇಟ್ ವಲಯಕ್ಕೆ ಬ್ಯಾಂಕ್ ಸಾಲದ ಮಿತಿ ತಗ್ಗಿಸಲು ಆರ್‌ಬಿಐ ಪ್ರಸ್ತಾಪ

ಶನಿವಾರ, 28 ಮಾರ್ಚ್ 2015 (15:14 IST)
ಕಾರ್ಪೊರೇಟ್ ಉದ್ಯಮ ಸಮೂಹವೊಂದಕ್ಕೆ ಬ್ಯಾಂಕ್ ನೀಡುವ ಸಾಲದ ಮಿತಿಯನ್ನು ತಗ್ಗಿಸಬೇಕೆಂದು ರಿಸರ್ವ್ ಬ್ಯಾಂಕ್ ಪ್ರಸ್ತಾಪ ಮಂಡಿಸಿದೆ.  ತೀರಿಸಲಾಗದ ಕೆಟ್ಟ ಸಾಲಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಅಪಾಯಗಳನ್ನು ಮೊಟಕುಮಾಡುವ ಕ್ರಮ ಇದಾಗಿದೆ. ಈ ಪ್ರಸ್ತಾವನೆ ಪ್ರಕಾರ ಬ್ಯಾಂಕ್‌ಗಳು ತಮ್ಮ ಮುಖ್ಯ ಬಂಡವಾಳದದಲ್ಲಿ ಶೇ.ಯ 25ರಷ್ಟು ಮಾತ್ರ ಸಾಲ ನೀಡಲು ಅವಕಾಶ ಕಲ್ಪಿಸಲಾಗುತ್ತದೆ.

ಇದಕ್ಕೆ ಮುಂಚೆ ಶೇ. 55ರಷ್ಟು ಸಾಲದ ಮಿತಿಯನ್ನು ವಿಧಿಸಲಾಗಿತ್ತು. ಇದಲ್ಲದೇ ಕಾರ್ಪೊರೇಟ್ ಬಾಂಡ್ ಮತ್ತು ವಾಣಿಜ್ಯ ಪತ್ರಗಳ ಮಾರುಕಟ್ಟೆಯಿಂದ ಕಂಪನಿಗಳು ಎತ್ತುವ ಕನಿಷ್ಠ ಶೇಕಡಾವಾರು ಬಂಡವಾಳ ಅಗತ್ಯಗಳನ್ನು ಗೊತ್ತುಮಾಡುವ ಬಗ್ಗೆ ಪರಿಶೀಲನೆ ಮಾಡುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ.  ಕಾರ್ಪೊರೇಟ್ ವಲಯಗಳು ಹಣಕಾಸಿನ ಅಗತ್ಯಗಳಿಗಾಗಿ ಬ್ಯಾಂಕ್‌ಗಳ ಮೇಲೆ ತುಂಬಾ ಅವಲಂಬಿತವಾಗಿದೆ ಎಂದೂ ಅದು ಹೇಳಿದೆ.

ಏಪ್ರಿಲ್ 30ರೊಳಗೆ ತನ್ನ ಪ್ರಸ್ತಾವನೆಗಳಿಗೆ ಪ್ರತಿಕ್ರಿಯೆಗಳನ್ನು ನೀಡಬೇಕೆಂದು ಆರ್‌ಬಿಐ ತಿಳಿಸಿದೆ.ಅಗತ್ಯಗಳಿಗಾಗಿ ಬ್ಯಾಂಕ್‌ಗಳ ಮೇಲೆ ತುಂಬಾ ಅವಲಂಬಿತವಾಗಿದೆ ಎಂದೂ ಅದು ಹೇಳಿದೆ. ಏಪ್ರಿಲ್ 30ರೊಳಗೆ ತನ್ನ ಪ್ರಸ್ತಾವನೆಗಳಿಗೆ ಪ್ರತಿಕ್ರಿಯೆಗಳನ್ನು ನೀಡಬೇಕೆಂದು ಆರ್‌ಬಿಐ ತಿಳಿಸಿದೆ.
 

ವೆಬ್ದುನಿಯಾವನ್ನು ಓದಿ