2015ರ ಜನವರಿ 1ರೊಳಗೆ ಹಳೆಯ ನೋಟು ಬದಲಾವಣೆಗೆ ಅವಕಾಶ

ಸೋಮವಾರ, 22 ಡಿಸೆಂಬರ್ 2014 (17:16 IST)
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ 2005ಕ್ಕೆ ಮುಂಚಿತವಾಗಿ ಮುದ್ರಿತವಾದ  500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳು ಸೇರಿದಂತೆ ಇತರೆ ಕರೆನ್ಸಿ ನೋಟುಗಳನ್ನು ಬದಲಾಯಿಸಲು ಸಾರ್ವಜನಿಕರಿಗೆ ಹೆಚ್ಚುವರಿ 9 ತಿಂಗಳನ್ನು ನೀಡಿದ್ದು,  2015 ಜನವರಿ 1ರ ಗಡುವನ್ನು ವಿಧಿಸಿದೆ.

ಪೂರ್ಣ ಮೌಲ್ಯಕ್ಕೆ ಈ ನೋಟುಗಳನ್ನು ಬದಲಾಯಿಸುವಂತೆ ಮತ್ತು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸಲಹೆ ಮಾಡಿದೆ.ಆರ್‌ಬಿಐ ಜನವರಿ 22ರಂದು 2005ಕ್ಕಿಂತ ಮುಂಚಿನ ಕರೆನ್ಸಿ ನೋಟುಗಳ ಚಲಾವಣೆಯನ್ನು ಏಪ್ರಿಲ್ 1ರಿಂದ ಹಿಂತೆಗೆದುಕೊಳ್ಳುವುದಾಗಿಯೂ ಮತ್ತು ಇಂತಹ ನೋಟುಗಳ ಬದಲಾವಣೆಗೆ ಬ್ಯಾಂಕ್‌ಗಳನ್ನು ಸಂಪರ್ಕಿಸುವಂತೆ ಜನರಿಗೆ ತಿಳಿಸಿತ್ತು.

2005ರ ಮುಂಚೆ ಬಿಡುಗಡೆಯಾದ ಕರೆನ್ಸಿ ನೋಟುಗಳ ಹಿಂದೆ ಮುದ್ರಣದ ವರ್ಷವನ್ನು ನೀಡಿಲ್ಲ. 2005ರ ನಂತರ ಬಿಡುಗಡೆಯಾದ ನೋಟುಗಳಲ್ಲಿ ಹಿಂಭಾಗದ ಕೆಳಭಾಗದಲ್ಲಿ ಮುದ್ರಿತ ವರ್ಷ ಕಾಣುತ್ತದೆ. ಒಂದೇ ಕಾಲದಲ್ಲಿ ಚಲಾವಣೆಯಲ್ಲಿ ಬಹು ನೋಟುಗಳ ಸರಣಿ ಇರಬಾರದೆಂಬ ಅಂತಾರಾಷ್ಟ್ರೀಯ ನಿಯಮಕ್ಕೆ ಅನುಗುಣವಾಗಿ ನೋಟುಗಳನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಆರ್‌ಬಿಐ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ