ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ 10 ರೂ.ನಾಣ್ಯಗಳ ಬಿಡುಗಡೆ

ಗುರುವಾರ, 30 ಜುಲೈ 2015 (20:30 IST)
ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಸ್ಮರಣಾರ್ಥ 10  ರೂ. ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡಲಿದೆ. 
ನಾಣ್ಯಗಳ ವೀಕ್ಷಣೆ ಭಾಗದಲ್ಲಿ ಅಶೋಕ ಸ್ತಂಭದ ಸಿಂಹದ ತಲೆ ಮಧ್ಯದಲ್ಲಿರುತ್ತದೆ ಮತ್ತು ಕೆಳಗೆ ಸತ್ಯ ಮೇವ ಜಯತೆ ನುಡಿಯನ್ನು ಕೆತ್ತಲಾಗಿದೆ.

ಮೇಲ್ಭಾಗದಲ್ಲಿ ಎಡಗಡೆ ದೇವನಾಗರಿ ಲಿಪಿಯಲ್ಲಿ ಭಾರತ್ ಪದವಿರುತ್ತದೆ. ಬಲಭಾಗದಲ್ಲಿ ಇಂಡಿಯಾ ಎಂದು ಇಂಗ್ಲಿಷಿನಲ್ಲಿರುತ್ತದೆ. ಹಿಂಭಾಗದಲ್ಲಿ ನಾಣ್ಯವು ಇಂಟರ್‌ನ್ಯಾಷನಲ್ ಡೇ ಆಫ್ ಯೋಗಾ ಲೋಗೊವನ್ನು ಹೊಂದಿದೆ.ಲೋಗೊ ಸುತ್ತಲೂ ಯೋಗಾ ಫಾರ್ ಹಾರ್ಮನಿ ಎಂಡ್ ಪೀಸ್ ಎಂದು ಇಂಗ್ಲೀಷಿನಲ್ಲಿ ಕೆತ್ತಲಾಗಿದೆ. 
 
ಎಡ ಭಾಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿವಸ್ ಎಂದು ದೇವನಾಗರಿ ಲಿಪಿಯಲ್ಲಿ ಕೆತ್ತಲಾಗಿದ್ದರೆ, ಬಲಭಾಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಎಂದು ಇಂಗ್ಲೀಷಿನಲ್ಲಿದೆ ಎಂದು ಆರ್‌ಬಿಐ ತಿಳಿಸಿದೆ.  ಲೋಗೋ ಕೆಳಗೆ 21 ಜೂನ್ ದಿನಾಂಕವಿದೆ. 

ವೆಬ್ದುನಿಯಾವನ್ನು ಓದಿ