ತೈಲ ಬೆಲೆಯಲ್ಲಿ ಕುಸಿತ ತಾತ್ಕಾಲಿಕ: ಸೌದಿ ಸಚಿವ

ಶನಿವಾರ, 20 ಡಿಸೆಂಬರ್ 2014 (16:18 IST)
ತೈಲ ಬೆಲೆಯಲ್ಲಿ ಇತ್ತೀಚಿನ ಕುಸಿತ ತಾತ್ಕಾಲಿಕವಾಗುವ ಸಾಧ್ಯತೆಯಿದೆ ಎಂದು ಸೌದಿ ಅರೇಬಿಯಾದ ತೈಲ ಖಾತೆ ಸಚಿವ ಆಲಿ ಅಲ್ ನೈಮಿ ತಿಳಿಸಿದ್ದಾರೆ. ಪದಾರ್ಥ ದರದಲ್ಲಿ ಏರುಪೇರಾಗುವುದು ನಿರೀಕ್ಷಿತ ಎಂದು ಹೇಳಿದ ಅವರು ಮುಂದಿನ ದಿನಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. 
 
ಸೌದಿ ಅರೇಬಿಯಾ ಅಥವಾ ಯಾವುದೇ ಒಪೆಕ್ ರಾಷ್ಟ್ರ ಮಾರುಕಟ್ಟೆಯಲ್ಲಿ ಪಾಲು ಕಡಿಮೆಯಾಗುವ ಅಥವಾ ಬೇರೆಯವರ ಪಾಲು ಹೆಚ್ಚುವ ಯಾವುದೇ ಕ್ರಮ ಕೈಗೊಳ್ಳುವುದು ಕಷ್ಟ ಎಂದು ನುಡಿದರು. ಜೂನ್‌ನಿಂದ ತೈಲ ದರ ಅರ್ಧಕ್ಕೆ ಕುಸಿದಿದೆ.
 
ಗುರುವಾರ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ $63ಕ್ಕಿಂತ ಕಡಿಮೆಯಾಗಿತ್ತು. ಅಮೆರಿಕ ಕಚ್ಚಾ ತೈಲ 58 ಡಾಲರ್‌ಗಳಾಗಿತ್ತು.ಚೀನಾ ಮುಂತಾದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಶೇಲ್ ಅನಿಲ ಹೊರತೆಗೆಯುವಿಕೆ ಮುಂತಾದ ಕ್ರಿಯೆಗಳಿಂದ ಇಂಧನ ಪೂರೈಕೆ ಹೆಚ್ಚಳದಿಂದ ಕಳೆದ ಬೇಸಿಗೆಯಲ್ಲಿ ಬ್ಯಾರೆಲ್‌ಗೆ 100 ಡಾಲರ್‌ಗಳಿದ್ದ ತೈಲದರಗಳು ಕುಸಿದಿವೆ.

ತೈಲ ಬಳಸುವ ರಾಷ್ಟ್ರಗಳು  ಕಡಿಮೆಯಾದ ಇಂಧನ ಮತ್ತು ಆಹಾರ ದರಗಳಿಂದ ಸಂತಸಗೊಂಡಿದ್ದರೆ, ತೈಲ ರಫ್ತು ರಾಷ್ಟ್ರಗಳಾದ ರಷ್ಯಾ ಮತ್ತು ಓಪೆಕ್ ತೈಲ ಉತ್ಪಾದನೆ ಒಕ್ಕೂಟ ರಾಷ್ಟ್ರಗಳು ಆದಾಯದಲ್ಲಿ ದೊಡ್ಡ ಕುಸಿತವನ್ನು ಅನುಭವಿಸಿದೆ. ಇಳಿಮುಖವಾದ ತೈಲ ದರದಿಂದ ರಷ್ಯಾದ ಕರೆನ್ಸಿ ಮೌಲ್ಯ ಕುಸಿದಿದ್ದು, ಅದರ ಅರ್ಥವ್ಯವಸ್ಥೆ ಆದಾಯಕ್ಕಾಗಿ ಅತಿಯಾಗಿ ತೈಲದ ಮೇಲೆ ಅವಲಂಬಿತವಾಗಿದೆ.ಒಪೆಕ್ ರಾಷ್ಟ್ರಗಳು ವಿಶ್ವ

ದ ಕಚ್ಚಾ ತೈಲದಲ್ಲಿ ಮೂರನೇ ಒಂದು ಭಾಗ ಅಂದರೆ  ದಿನಕ್ಕೆ 30 ದಶಲಕ್ಷ ಬ್ಯಾರೆಲ್  ಉತ್ಪಾದಿಸುತ್ತಿದ್ದು, ಸೌದಿ ಅರೇಬಿಯಾ 9.6 ದಶಲಕ್ಷ ಬ್ಯಾರೆಲ್ ಉತ್ಪಾದನೆ ಮಾಡುತ್ತಿದೆ. 

ವೆಬ್ದುನಿಯಾವನ್ನು ಓದಿ