ಗ್ರಾಹಕರಿಗೆ ಬಂಪರ್ ಕೊಡುಗೆ: ಕೇವಲ 1 ರೂ.ದರದಲ್ಲಿ 300 ನಿಮಿಷಗಳ 4ಜಿ ಕಾಲಿಂಗ್ ಸೇವೆ

ಬುಧವಾರ, 31 ಆಗಸ್ಟ್ 2016 (09:27 IST)
ಜಿಯೋ 4ಜಿ ಸೇವೆ ಅನಾವರಣಗೊಂಡ ಬೆನ್ನಲ್ಲೆ ರಿಲಯನ್ಸ್ ಕಮ್ಯೂನಿಕೇಶನ್ಸ್ ಆಯೋಜಕರು ಕೇವಲ 1 ರೂಪಾಯಿ ದರದಲ್ಲಿ ಆಪ್ ಟೂ ಆಪ್ 4ಜಿ ಕಾಲಿಂಗ್ ಸೇವೆಯನ್ನು ಘೋಷಿಸಿದೆ.
 
ಅನಿಲ್ ಅಂಬಾನಿ ನೇತೃತ್ವದ ಸಂಸ್ಥೆ, ಕೇವಲ 1 ರೂಪಾಯಿ ದರದಲ್ಲಿ 30 ದಿನಗಳ ಕಾಲ 300 ನಿಮಿಷಗಳ ಆಪ್ ಟೂ ಆಪ್ 4ಜಿ ಕಾಲಿಂಗ್ ಸೇವೆ ನೀಡಿದೆ. ಈ ಯೋಜನೆಯಲ್ಲಿ ಸೀಮಿತ ಅವಧಿಯವರೆಗೂ ಪ್ರತಿ ನಿತ್ಯ 10 ನಿಮಿಷಗಳ ಕಾಲ ಆಪ್ ಟೂ ಆಪ್ 4ಜಿ ಕಾಲಿಂಗ್ ಸೇವೆಯನ್ನು ಆನಂದಿಸಬಹುದಾಗಿದೆ. 
 
ಈ ಯೋಜನೆ ಅಡಿಯಲ್ಲಿ ಆಪ್ ಟೂ ಆಪ್ ಕಾಲಿಂಗ್ ಸೇವೆ ಆನಂದಿಸಲು ಬಳಕೆದಾರರಿಗೆ 7 ಎಮ್‌ಬಿ ಡೇಟಾವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ರಿಲಯನ್ಸ್ ಕಮ್ಯೂನಿಕೇಶನ್ಸ್‌ನ ಗ್ರಾಹಕ ವ್ಯವಹಾರಗಳ ಸಿಇಒ ಗುರ್ದಿಪ್ ಸಿಂಗ್ ವರದಿಯಲ್ಲಿ ತಿಳಿಸಿದ್ದಾರೆ.
 
ರಿಲಯನ್ಸ್ ಕಮ್ಯುನಿಕೇಷನ್ಸ್ 110 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಆದರೆ, ಸಂಸ್ಥೆ 4ಜಿ ಬಳಕೆದಾರರ ಸಂಸ್ಥೆಯನ್ನು ಬಹಿರಂಗಗೊಳಿಸಿಲ್ಲ. 
 
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಬಾರಿ ಪೈಪೋಟಿ ಎದುರಾದ ಹಿನ್ನೆಲೆಯಲ್ಲಿ ಏರ್‌ಟೆಲ್, ವೋಡಾಪೋನ್ ಸೇರಿದಂತೆ ಇತರೆ ಟಿಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೇಳೆಯಲು ಹಲವು ಯೋಜನೆಗಳನ್ನು ಘೋಷಿಸುತ್ತಿವೆ. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ