ಜಿಯೋಗಾಗಿ ಇನ್ನಷ್ಟು ವೆಚ್ಚ ಮಾಡಲಿರುವ ಅಂಬಾನಿ

ಮಂಗಳವಾರ, 17 ಜನವರಿ 2017 (10:37 IST)
ಜಿಯೋ ನೆಟ್‌ವರ್ಕ್ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದು ಗೊತ್ತೆ ಇದೆ. ಇದೀಗ ಮಾರುಕಟ್ಟೆ ಪೈಪೋಟಿಯನ್ನು ತಡೆದುಕೊಳ್ಳಲು ಜಿಯೋ ಮೇಲೆ ಇನ್ನಷ್ಟು ವೆಚ್ಚ ಮಾಡಲು ಅಂಬಾನಿ ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು. ಜಿಯೋ ನೆಟ್‌ವರ್ಕ್ ಆರಂಭಿಸಲು 25 ಬಿಲಿಯನ್ ಡಾಲರ್ ಹೂಡಿಕೆ ಮಾಡಿರುವ ಅಂಬಾನಿ ಆ ಬಳಿಕ ಮಾರುಕಟ್ಟೆಯ ಇತರೆ ನೆಟ್‍ವರ್ಕ್‌ಗಳ ಸ್ಪರ್ಧೆಯನ್ನು ತಡೆದುಕೊಳ್ಳೌ 4.4 ಬಿಲಿಯನ್ ಡಾಲರ್ ವೆಚ್ಚ ಮಾಡಲಿದ್ದಾರೆ.
 
ರೈಟ್ಸ್ ಆಫರ್ ಮೂಲಕ ಈ ಮೊತ್ತವನ್ನು ಸಂಗ್ರಹಿರುವ ಜಿಯೋ ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸಲು ಉಪಯೋಗಿಸಲಿದೆ ಎಂದು ಜಿಯೋ ಇನ್ಫೋಕಾಮ್ ಲಿಮಿಟೆಡ್ ಪ್ರಕಟಸಿದೆ. ಜಿಯೋ ಆರಂಭಸಿದಂದಿನಿಂದ 72.4 ಮಿಲಿಯನ್ ಗ್ರಾಹಕರು ಇದ್ದು, ದಿನಕ್ಕೆ 6 ಲಕ್ಷ ಮಂದಿ ಜಿಯೋಗೆ ಬದಲಾಗುತ್ತಿದ್ದಾರೆಂದು ಕಂಪೆನಿ ತಿಳಿಸಿದೆ.
 
ಹೊಸದಾಗಿ ಜಿಯೋ ಮೇಲೆ ಹೂಡುವ ಬಂಡವಾಳ ಜಿಯೋ ನೆಟ್‍ವರ್ಕ್ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗಲಿದೆ. ಮಾರ್ಚ್ ವರೆಗೂ ಜಿಯೋ ಗ್ರಾಹಕರಿಗೆ ಉಚಿತ ಡಾಟಾ, ಉಚಿತ ಕರೆಗಳು ನೀಡಲು ಸಹಾಯಕವಾಗಿದೆ ಎಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ