700 ಕೋಟಿ ರೂ.ಗೆ ಬಿಗ್ ಸಿನೇಮಾಸ್ ಮಾರಾಟ ಮಾಡಿದ ರಿಲಯನ್ಸ್ ಮೀಡಿಯಾ

ಮಂಗಳವಾರ, 16 ಡಿಸೆಂಬರ್ 2014 (19:40 IST)
ಅನಿಲ್ ಅಂಬಾನಿಯ ರಿಲಯನ್ಸ್ ಮೀಡಿಯಾ ವರ್ಕ್ಸ್‌ನ ಭಾಗ ಬಿಗ್ ಸಿನೇಮಾಸ್ ಕಂಪನಿಯ ಶೇ. 100 ಶೇರುಗಳನ್ನು ಕಾರ್ನಿವಾಲ್ ಫಿಲ್ಮ್ಸ್ ಪ್ರೈ. ಲಿ. 700 ಕೋಟಿ ರೂ.ಗೆ ಖರೀದಿಸಿದೆ.

ಈವಹಿವಾಟಿನಿಂದ ರಿಲಯನ್ಸ್ ಕ್ಯಾಪಿಟಲ್ ಸಾಲದ ಹೊರೆ 700 ಕೋಟಿ ರೂ. ತಗ್ಗಲಿದೆ ಎಂದು ರಿಲಯನ್ಸ್ ಕ್ಯಾಪಿಟಲ್ ಹೇಳಿಕೆಯಲ್ಲಿ ತಿಳಿಸಿದೆ.

ರಿಲಯನ್ಸ್ ಮೀಡಿಯಾ ವರ್ಕ್ಸ್ ಮಾಲೀಕತ್ವದ ಐಮಾಕ್ಸ್ ವಡಾಲಾದಲ್ಲಿರುವ ಸ್ಥಿರಾಸ್ತಿಯನ್ನು ಈ ವಹಿವಾಟಿನಿಂದ ಹೊರಗಿಡಲಾಗಿದೆ. ಇದರಿಂದಾಗಿ ಕಾರ್ನಿವಾಲ್ ಫಿಲ್ಮ್ಸ್ ಚಲನಚಿತ್ರ ಪ್ರದರ್ಶನ ಕೈಗಾರಿಕೆಯು ಮತ್ತಷ್ಟು ಬಲಶಾಲಿಯಾಗಿದೆ. 

ವೆಬ್ದುನಿಯಾವನ್ನು ಓದಿ