ಜಿಯೋ ಸಿಮ್ ಆಯ್ತು.. ಇದೀಗ 500 ರೂ.ಗೆ 4 ಜಿ ಮೊಬೈಲ್ ನೀಡುತ್ತಾ ರಿಲಯನ್ಸ್?!

ಬುಧವಾರ, 5 ಜುಲೈ 2017 (11:15 IST)
ನವದೆಹಲಿ: ರಿಲಯನ್ಸ್ ಜಿಯೋ ಎಂದ ತಕ್ಷಣ ಇದೀಗ ಜನರ ಕಿವಿ ನೆಟ್ಟಗಾಗುತ್ತದೆ. ಅಗ್ಗದ ದರದಲ್ಲಿ 4 ಜಿ ಇಂಟರ್ ನೆಟ್ ಒದಗಿಸಿದ ರಿಲಯನ್ಸ್ ಸಂಸ್ಥೆ ದೇಶದಲ್ಲಿ ಹೊಸ ಟೆಲಿಕಾಂ ಕ್ರಾಂತಿಗೆ ನಾಂದಿ ಹಾಡಿತ್ತು.


ಇದೀಗ ಮತ್ತೆ ಜಿಯೋ ಸದ್ದು ಮಾಡುತ್ತಿದೆ. ಕಡಿಮೆ ದರದಲ್ಲಿ ಇಂಟರ್ ನೆಟ್ ಒದಗಿಸಿದರೆ ಸಾಕೇ? ಎಷ್ಟೋ ಜನರಿಗೆ 4 ಜಿ ಸಪೋರ್ಟ್ ಮಾಡುವ ಮೊಬೈಲ್ ಖರೀದಿಸುವ ಹಣಕಾಸಿನ ಸಾಮರ್ಥ್ಯವಿರುವುದಿಲ್ಲ. ಹೀಗಾಗಿ 2 ಜಿ ಫೋನ್ ಇಟ್ಟುಕೊಂಡು ಪರದಾಡುವ ಗ್ರಾಹಕರ ನೆರವಿಗೆ ಜಿಯೋ ಬರಲಿದೆ.

ಅಂದರೆ ಕಡಿಮೆ ಖರ್ಚಿನಲ್ಲಿ 4ಜಿ  ವಾಯ್ಸ್ ಓವರ್ ಎಲ್ ಟಿಇ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡಲು ರಿಲಯನ್ಸ್ ಚಿಂತನೆ ನಡೆಸಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಬಹುಶಃ ಈ ತಿಂಗಳ 21 ಕ್ಕೆ ರಿಲಯನ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಈ ಘೋಷಣೆ ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ಹಾಗಾದಲ್ಲಿ ಗ್ರಾಹಕರಿಗೆ 4 ಜಿ ಇಂಟರ್ ನೆಟ್ ಸೇವೆ ಪಡೆಯಲು ಅಗ್ಗದ ಬೆಲೆಯಲ್ಲಿ ಮೊಬೈಲ್ ಖರೀದಿ ಮಾಡಬಹುದಾಗಿದೆ. ಆಗಾಗ ಹೊರಬಿಡುವ ಭರ್ಜರಿ 4 ಜಿ ಆಫರ್ ಗಳಿಗೆ ಗ್ರಾಹಕರನ್ನು ಸೆಳೆಯುಲ ರಿಲಯನ್ಸ್ ಇಂತಹದ್ದೊಂದು ಐಡಿಯಾ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ... ಬಹುಭಾಷಾ ತಾರೆಗೆ ಲೈಂಗಿಕ ಕಿರುಕುಳ ಪ್ರಕರಣ: ಸಂಕಷ್ಟದಲ್ಲಿ ಮಲಯಾಳಂ ಸ್ಟಾರ್ ನಟ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ