ಶೇ. 0.25 ರೆಪೋ ದರ ಕಡಿತ: ಗೃಹಸಾಲದ ಬಡ್ಡಿ ದರ ಕಡಿಮೆ ಸಾಧ್ಯತೆ

ಬುಧವಾರ, 4 ಮಾರ್ಚ್ 2015 (10:09 IST)
ಆರ್‌ಬಿಐ ಶೇ. 0.25 ರೆಪೋ ದರ ಕಡಿತ ಮಾಡಿದ್ದು ಇದರಿಂದ ಹಣದುಬ್ಬರ ಕುಸಿತ ಉಂಟಾಗುವುದೆಂದು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಆಶಿಸಿದ್ದಾರೆ. ರೆಪೋ ದರ ಕಡಿತಗೊಳಿಸಿದ್ದರಿಂದ  ಗೃಹಸಾಲಗಳ ಮೇಲಿನ ಬಡ್ಡದರಗಳನ್ನು ಬ್ಯಾಂಕ್‌ಗಳು ಕಡಿತ ಮಾಡುವುದೆಂದು ನಿರೀಕ್ಷಿಸಲಾಗಿದೆ. 
 
ಆರ್‌ಬಿಐ ರೆಪೋ ದರವನ್ನು ಶೇ. 7.75ರಿಂದ ಶೇ. 7.50ಕ್ಕೆ ಕಡಿತ ಮಾಡಿದ್ದು, ಸಿಸಿಐ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೋ ದರವನ್ನು ಆರ್‌ಬಿಐ ಎರಡನೇ ಬಾರಿಗೆ ಕಡಿತ ಮಾಡುತ್ತಿದ್ದು, ಕಳೆದ ಬಾರಿ ಕೆಲವೇ ಬ್ಯಾಂಕ್‌ಗಳು ಗೃಹಸಾಲಗಳ ಮೇಲಿನ ಬಡ್ಡಿ ದರ ಕಡಿತ ಮಾಡಿದ್ದವು.

ಆದರೆ ಈ ಬಾರಿ ಎಲ್ಲಾ ಬ್ಯಾಂಕುಗಳು ಗೃಹಸಾಲಗಳ ಮೇಲಿನ ಬಡ್ಡಿ ದರ ಕಡಿತಕ್ಕೆ ಸ್ಪಂದಿಸುತ್ತವೆಂದು ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ