ರಿಸರ್ವ್ ಬ್ಯಾಂಕ್ ಗವರ್ನರ್ ವಿಟೋ ಅಧಿಕಾರಕ್ಕೆ ಕತ್ತರಿ

ಶುಕ್ರವಾರ, 24 ಜುಲೈ 2015 (19:42 IST)
ಕೇಂದ್ರ ಸರ್ಕಾರ ಭಾರತದ ವಿತ್ತೀಯ ನೀತಿ ಕುರಿತು ತೀರ್ಮಾನ ಕೈಗೊಳ್ಳುವ  ರಿಸರ್ವ್ ಬ್ಯಾಂಕ್ ಗವರ್ನರ್ ಅವರ ವೀಟೊ ಮತದಾನದ ಹಕ್ಕಿಗೆ ಕತ್ತರಿ ಹಾಕುವ  ಪ್ರಸ್ತಾಪ ಮಾಡಿದೆ.  ವಿತ್ತೀಯ ನೀತಿ ಸಮಿತಿಗೆ 6 ಸದಸ್ಯರ ಪೈಕಿ 4 ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಸರ್ಕಾರ ಪ್ರಸ್ತಾಪ ಮಾಡಿದೆ.

ಭಾರತೀಯ ಹಣಕಾಸು ಸಂಹಿತೆಯ ಪರಿಷ್ಕೃತ ಕರಡಿನಲ್ಲಿ ರಿಸರ್ವ್ ಬ್ಯಾಂಕ್ ಚೇರ್ ಪರ್ಸನ್ ಸಮಿತಿಯ ನೇತೃತ್ವ ವಹಿಸುತ್ತಾರೆ. ಆದರೆ ರಿಸರ್ವ್ ಬ್ಯಾಂಕ್ ಗವರ್ನರ್ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ.  ಹಣದುಬ್ಬರದ ನಿಯಂತ್ರಣಕ್ಕೆ ಬಡ್ಡಿದರ ನಿಗದಿಮಾಡುವ ಅಧಿಕಾರವನ್ನು ಈ ಸಮಿತಿಗೆ ನೀಡಲಾಗುತ್ತದೆ. 
 
ಮುಂಚಿನ ಕರಡಿನಲ್ಲಿ ವಿತ್ತೀಯ ನೀತಿ ಸಮಿತಿಯ ನಿರ್ಧಾರವನ್ನು ತಳ್ಳಿಹಾಕುವ ಹಕ್ಕನ್ನು ಗವರ್ನರ್ ಅವರಿಗೆ ನೀಡಲಾಗಿತ್ತು. ಹಣದುಬ್ಬರದ  ಗುರಿಯನ್ನು ಪೂರೈಸದಿದ್ದರೆ, ರಿಸರ್ವ್ ಬ್ಯಾಂಕ್ ಕಾರಣಗಳನ್ನು ವಿವರಿಸಿ ಪರಿಹಾರ ಕ್ರಮಗಳನ್ನು ಪ್ರಸ್ತಾಪಿಸಬೇಕು.
 
ಪರಿಷ್ಕೃತ ಕರಡಿನ ಪ್ರಕಾರ,  ಸಮಿತಿಗೆ ಸರ್ಕಾರೇತರ ಸದಸ್ಯರನ್ನು ರಿಸರ್ವ್ ಬ್ಯಾಂಕ್‌‌ನಿಂದ ಆಯ್ಕೆ ಮಾಡಬೇಕು. ರಿಸರ್ವ್ ಬ್ಯಾಂಕ್ ಮಂಡಳಿಯು ತನ್ನ ಎಕ್ಸಿಕ್ಯೂಟಿವ್‌ಗಳಲ್ಲಿ ಒಬ್ಬರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡುತ್ತದೆ. ಚೇರ್‌ಪರ್ಸನ್ ತನ್ನ ನೌಕರರಲ್ಲಿ ಒಬ್ಬರನ್ನು 6 ನೇ ಸದಸ್ಯರನ್ನಾಗಿ ನೇಮಕ ಮಾಡುತ್ತದೆ. 
 
ಆರ್‌ಬಿಐ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡುವ ಕುರಿತು ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ನಡುವೆ ನಡೆದ ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. 
 

ವೆಬ್ದುನಿಯಾವನ್ನು ಓದಿ