ಫೋಟೊ ತೆಗೆಯುವ, ನೃತ್ಯ ಮಾಡುವ ಜಗತ್ತಿನ ಪ್ರಥಮ ರೊಬೊಟ್ ಫೋನ್

ಸೋಮವಾರ, 12 ಅಕ್ಟೋಬರ್ 2015 (19:13 IST)
ಜಪಾನಿನ ಮಲ್ಟಿನ್ಯಾಷನಲ್ ಕಾರ್ಪೊರೇಷನ್ ಶಾರ್ಪ್ ಜಗತ್ತಿನ ಪ್ರಥಮ ನಿಮ್ಮ ಜೇಬಿಗೆ ಹಿಡಿಸುವ ರೊಬೊಟ್ ಫೋನ್ ತಯಾರಿಕೆಯನ್ನು ಪ್ರಕಟಿಸಿದೆ. ರೊಬೊಹೋನ್ ಎಂದು ಕರೆಯುವ ಇದು ಕರೆಗಳನ್ನು ಸ್ವೀಕರಿಸುತ್ತದೆ, ನೃತ್ಯ ಮಾಡುತ್ತದೆ, ಫೋಟೊಗಳನ್ನು ಪ್ರೊಜೆಕ್ಟ್ ಮಾಡುತ್ತದೆ, ನಕ್ಷೆಗಳನ್ನು ಪ್ರದರ್ಶಿಸುತ್ತದೆ, ಹೀಗೆ ನಾನಾ ಕೆಲಸಗಳನ್ನು ಮಾಡುತ್ತದೆ. ಟಚ್ ಸ್ಕ್ರೀನ್ ಚಿಕ್ಕದಾಗಿದ್ದು,  ಪ್ರತಿಯೊಂದು ಹೋಮ್ ಸ್ಕ್ರೀನ್‌ನಲ್ಲಿ ನಾಲ್ಕು ಐಕಾನ್‌ಗಳಿಗೆ ಜಾಗವಿರುತ್ತದೆ.  ಪ್ರಖ್ಯಾತ ಪ್ರಾಧ್ಯಾಪಕ ಮತ್ತು ರೋಬೋಟಿಸಿಸ್ಟ್ ಟೊಮೊಟಾಕಾ ಟಕಾಹಷಿ ಈ ಉಪಕರಣ ಅಭಿವೃದ್ಧಿಪಡಿಸಿದ್ದು, ಮುಂದಿನ ವರ್ಷ ಕಾರ್ಯಾರಂಭ ಮಾಡುತ್ತದೆ.
 
ರೋಬೊಹಾನ್ ಬಳಸುವ ಪ್ರಾಥಮಿಕ ವಿಧಾನ ಅದರ ಜತೆ ಮಾತನಾಡುವುದು. ಟಚ್‌ಸ್ಕ್ರೀನ್ ಎರಡನೇ ಇಂಟರ್‌ಫೇಸ್ ಎಂದು ಶಾರ್ಪ್ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. 
 
 ರೊಬೊಟ್‍‌ ಫೋನ್‌ನಲ್ಲಿ ಎರಡು ಅಂಗುಲ ಸ್ಕ್ರೀನ್ ಹಿಂಭಾಗದಲ್ಲಿದ್ದು, ಬಿಲ್ಟ್ ಇನ್ ಕ್ಯಾಮರಾ ಮತ್ತು ಅದರ ಮುಖದಲ್ಲಿ ಪ್ರೊಜೆಕ್ಟರ್ ಇರುತ್ತದೆ. ಕೈ ಮತ್ತು ಕಾಲುಗಳಿಂದ ರೊಬೋಟ್ ನಡೆಯುತ್ತದೆ ಮತ್ತು ನೀವು ಸೌಜನ್ಯದಿಂದ ಕೇಳಿದರೆ ನೃತ್ಯ ಕೂಡ ಮಾಡುತ್ತದೆ. 
 
 ರೊಬೊಟ್ ಫೋನ್ ಚಿತ್ರಗಳನ್ನು ತೆಗೆಯುತ್ತದೆ, ಜನರನ್ನು ಕರೆಯುತ್ತದೆ, ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತದೆ, ಸಂದೇಶಗಳಿಗೆ ಉತ್ತರಿಸುತ್ತದೆ ಮತ್ತು ಸಣ್ಣ ಪ್ರೊಜೆಕ್ಟರ್‌ನಿಂದ ಚಿತ್ರ ಮತ್ತು ವಿಡಿಯೊಗಳನ್ನು ಪ್ರೊಜೆಕ್ಟ್ ಮಾಡುತ್ತದೆ. 

ವೆಬ್ದುನಿಯಾವನ್ನು ಓದಿ