ಜರ್ಮನಿ: ವೊಕ್ಸ್‌ವಾಗೆನ್ ಘಟಕದಲ್ಲಿ ಉದ್ಯೋಗಿಯನ್ನು ಹತ್ಯೆ ಮಾಡಿದ ರೋಬೋಟ್

ಗುರುವಾರ, 2 ಜುಲೈ 2015 (16:44 IST)
ವಿಶ್ವ ವಿಖ್ಯಾತ ಕಾರು ತಯಾರಿಕೆ ಕಂಪೆನಿಯಾದ ವೊಕ್ಸ್‌ವಾಗೆನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೊಬ್ಬನನ್ನು ರೋಬೋಟ್ ಹತ್ಯೆ ಮಾಡಿದ ದಾರುಣ ಘಟನೆ ವರದಿಯಾಗಿದೆ.
 
ಫ್ರಾಂಕ್‌ಫರ್ಟ್‌ನಿಂದ 100 ಕಿ.ಮೀ ದೂರದಲ್ಲಿರುವ ಬಾನಾಟಲ್ ಕಾರು ತಯಾರಿಕೆ ಘಟಕದಲ್ಲಿ ಈ ಘಟನೆ ನಡೆದಿದೆ ಎಂದು ವೊಕ್ಸ್‌ವಾಗೆನ್ ಕಂಪೆನಿಯ ವಕ್ತಾರರಾದ ಹೈಕೋ ಹಿಲ್ವಿಂಗ್‌ ತಿಳಿಸಿದ್ದಾರೆ.
   
ತಾಂತ್ರಿಕ ದೋಷದಿಂದಾಗಿ ರೋಬೋಟ್, ಕಬ್ಬಿಣದ ಪ್ಲೇಟಿನ ಬದಲಾಗಿ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ 22 ವರ್ಷ ವಯಸ್ಸಿನ ಉದ್ಯೋಗಿಯೊಬ್ಬನನ್ನು ಹಿಡಿದು ಹಿಸುಕಿ ಹಾಕಿದೆ ಎಂದು ಹಿಲ್ವಿಂಗ್ ಹೇಳಿದ್ದಾರೆ. 
 
ರೋಬೋಟ್‌ ಯಂತ್ರವನ್ನು ದೋಷಿಸುವ ಬದಲು ಮಾನವನ ತಂತ್ರಜ್ಞಾನದ ದೋಷವಾಗಿದೆ. ಕಾರುಗಳ ತಯಾರಿಕೆಯಲ್ಲಿ ಅಸೆಂಬ್ಲಿ ಪ್ರೊಸೆಸ್‌ನಲ್ಲಿ ರೋಬೋಟ್ ಯಂತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. 
 
ಮತ್ತೊಬ್ಬ ಉದ್ಯೋಗಿ ಕೂಡಾ ಘಟನಾ ಸ್ಥಳದಲ್ಲಿ ಉಪಸ್ಥಿತನಿದ್ದ. ಆದರೆ, ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ ಎಂದು ಕಂಪೆನಿ ಹೇಳಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದರಿಂದ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ