ಫಾರೆಕ್ಸ್‌‌‌ : 12 ಪೈಸೆ ಕುಸಿತ ಕಂಡ ರೂಪಾಯಿ

ಸೋಮವಾರ, 28 ಏಪ್ರಿಲ್ 2014 (16:45 IST)
ಆಯತಗಾರರಿಂದ ತಿಂಗಳ ಅಂತ್ಯದಲ್ಲಿ ಡಾಲರ್‌‌ ಬೇಡಿಕೆ ಹೆಚ್ಚಳವಾಗುವುದರ ಮುಲಕ ಫಾರೆಕ್ಸ್‌‌ ಮಾರುಕಟ್ಟೆಯಲ್ಲಿ ಇಂದಿನ ಪ್ರಾರಂಭಿಕ ವಹಿವಾಟಿನಲ್ಲಿ ಡಾಲರ್‌‌‌ ಎದರು 12 ಪೈಸೆ ಇಳಿಕೆಯಾಗುವದರ ಮೂಲಕ ಪ್ರತಿ ಡಾಲರ್‌‌ಗೆ 60.72 ರೂಪಾಯಿಗೆ ತಲುಪಿದೆ. ಸ್ವದೇಶೀ ಶೇರು ಮಾರುಕಟ್ಟೆಯಲ್ಲಿ ಮಂದಗತಿಯ ವಹಿವಾಟುವಿನಿಂದಾಗಿ ರೂಪಾಯಿ ಮೇಲೆ ಪರಿಣಾಮ ಬೀರಿದೆ ಎಂದು ಫಾರೆಕ್ಸ್‌ ವಿಶ್ಲೇಷಕರು ತಿಳಿಸಿದ್ದಾರೆ. 
 
ಕಳೆದ ದಿನದ ವಹಿವಾಟುವಿನಲ್ಲಿ ಡಾಲರ್‌ ಎದುರು ರೂಪಾಯಿ 47 ಪೈಸೆ ಚೇತರಿಕೆ ಕಾಣುವುದರ ಮೂಲಕ್ ಪ್ರತಿ ಡಾಲರ್‌‌ಗೆ 60.60 ರೂಪಾಯಿನಿಂದ ವಹಿವಾಟು ಸ್ಥಗಿತಗೊಂಡಿತ್ತು. ಆದರೆ ಇಂದಿನ ದಿನದ ವಹಿವಾಟಿನಲ್ಲಿ 12 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್‌‌ಗೆ 60.72 ರೂಪಾಯಿನಿಂದ ಮಾರುಕಟ್ಟೆಯ ವಹಿವಾಟು ಪ್ರಾರಂಭವಾಗಿದೆ. 
 
ಮುಂಬೈ ಶೇರು ಮಾರುಕಟ್ಟೆಯ ಇಂದಿನ ಪ್ರಾರಂಭಿಕ ವಹಿವಾಟುವಿನ ಸೂಚಂಕದ್ಲಲಿ 27.44 ಅಂಕ ಅಥವಾ ಶೇ.0.12ರಷ್ಟು ಇಳಿಕೆ ಆಗಿ 22,660.63ಕ್ಕೆ ತಲುಪಿದೆ.

ವೆಬ್ದುನಿಯಾವನ್ನು ಓದಿ