ಫಾರೆಕ್ಸ್: ಡಾಲರ್ ಎದುರಿಗೆ 11 ಪೈಸೆ ಚೇತರಿಕೆ ಕಂಡ ರೂಪಾಯಿ

ಶುಕ್ರವಾರ, 13 ನವೆಂಬರ್ 2015 (15:22 IST)
ರಫ್ತುವಹಿವಾಟುದಾರರು ಡಾಲರ್‌ಗಳ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 11 ಪೈಸೆ ಹೆಚ್ಚಳವಾಗಿ 66.20 ರೂಪಾಯಿಗಳಿಗೆ ತಲುಪಿದೆ.
 
ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಕುಸಿತವಾಗಿದ್ದರಿಂದ ರೂಪಾಯಿ ಎದುರಿಗೆ ಡಾಲರ್ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
 
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 13 ಪೈಸೆ ಏರಿಕೆಯಾಗಿ 66.31 ರೂಪಾಯಿಗಳಿಗೆ ತಲುಪಿತ್ತು.
 
ಬುಧವಾರ ಮತ್ತು ಗುರುವಾರದಂದು ದೀಪಾವಳಿ ಬಲಿಪ್ರತಿಪದ ಹಬ್ಬದ ನಿಮಿತ್ಯ ಮಾರುಕಟ್ಟೆಗೆ ರಜೆ ಘೋಷಿಸಲಾಗಿತ್ತು.
 
ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 228.41 ಪಾಯಿಂಟ್‌ಗಳ ಕುಸಿತ ಕಂಡು 25,638.54 ಅಂಕಗಳಿಗೆ ತಲುಪಿದೆ.  

ವೆಬ್ದುನಿಯಾವನ್ನು ಓದಿ