ಫಾರೆಕ್ಸ್‌‌‌: ರೂಪಾಯಿಯಲ್ಲಿ 16 ಪೈಸೆ ಚೇತರಿಕೆ

ಗುರುವಾರ, 3 ಜುಲೈ 2014 (15:55 IST)
ಶೇರು ಮಾರುಕಟ್ಟೆಯಲ್ಲಿ ಬಂಡವಾಳದ ಒಳ ಹರಿವು ಹೆಚ್ಚಾದ ಕಾರಣ ಮತ್ತು ರಪ್ತುದಾರರಿಂದ ಡಾಲರ್‌ ಮಾರಾಟ ಹೆಚ್ಚಳವಾಗಿದ್ದರಿಂದ ಫಾರೆಕ್ಸ್‌ ಮಾರುಕಟ್ಟೆಯಲ್ಲಿ ಇಂದಿನ ಪ್ರಾರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 16 ಪೈಸೆ ಚೇತರಿಕೆ ಕಂಡು ಪ್ರತಿ ಡಾಲರ್‌ಗೆ 59.53 ರೂಪಾಯಿಗಳಿಗೆ ತಲುಪಿದೆ.      
 
ಫಾರೆಕ್ಸ್‌ ಮಾರುಕಟ್ಟೆಯಲ್ಲಿ ಕಳೆದ ದಿನದ ವಹಿವಾಟಿನಲ್ಲಿ ರೂಪಾಯಿಯಲ್ಲಿ 38 ಪೈಸೆ ಚೇತರಿಕೆ ಕಂಡು ಬಂದು ಪ್ರತಿ ಡಾಲರ್‌ಗೆ 58.69 ರೂಪಾಯಿಗಳಿಗೆ ತಲುಪಿ ವಹಿವಾಟು ಸ್ಥಗಿತಗೊಂಡಿತ್ತು. ಆದರೆ, ಇಂದಿನ ದಿನದ ವಹಿವಾಟಿನಲ್ಲಿ ರೂಪಾಯಿಯಲ್ಲಿ 16 ಪೈಸೆ ಚೇತರಿಕೆಯಾಗಿ ಪ್ರತಿ ಡಾಲರ್‌ಗೆ 59.53 ರೂಪಾಯಿಗಳಿಗೆ ತಲುಪಿದೆ. 
  
ಮುಂಬೈ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌‌ ಪ್ರಾರಂಭಿಕ ವಹಿವಾಟಿನಲ್ಲಿ 83.04 ಅಂಕ ಅಥವಾ ಶೇ.0.32 ರಷ್ಟು ಹೆಚ್ಚಳವಾಗಿ 25,924.25 ಅಂಕಗಳಿಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ