ನಿರ್ಬಂಧ ಸಡಿಲ: ರಷ್ಯಾಗೆ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಸಜ್ಜು

ಬುಧವಾರ, 24 ಡಿಸೆಂಬರ್ 2014 (19:11 IST)
ಹಾಲು, ಗಿಣ್ಣು ಮತ್ತಿತರ ಡೈರಿ ಉತ್ಪನ್ನಗಳ ಆಮದಿಗೆ ನಿರ್ಬಂಧಗಳನ್ನು ತೆಗೆಯುವ ರಷ್ಯಾ ನಿರ್ಧಾರದಿಂದ ದೇಶದ ಅತೀ ದೊಡ್ಡ ಡೈರಿ ಬ್ರಾಂಡ್ ಅಮುಲ್  ಅನುಕೂಲ ಪಡೆಯಲಿದೆ. 
 
 ರಷ್ಯಾ ಈಗ ಭಾರತ ಮುಂತಾದ ರಾಷ್ಟ್ರಗಳ ಮಾರುಕಟ್ಟೆಯತ್ತ ಕಣ್ಣು ಹಾಯಿಸಿದೆ.  ರಷ್ಯಾಗೆ ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದಂಡಗಳನ್ನು ಹೇರಿದ್ದರಿಂದ ಅದಕ್ಕೆ ಪ್ರತಿಯಾಗಿ ರಷ್ಯಾ ಕೆನಡಾ, ಐರೋಪ್ಯ ಒಕ್ಕೂಟ, ನಾರ್ವೆ, ಆಸ್ಟ್ರೇಲಿಯಾ, ಅಮೆರಿಕಾ ಮುಂತಾದ ದೇಶಗಳಿಂದ ಹಸುವಿನ ಮಾಂಸ, ಹಂದಿ ಮಾಂಸ, ಕೋಳಿ, ಮೀನು, ಹಣ್ಣು, ಗಿಣ್ಣು, ಹಾಲು ಮತ್ತಿತರ ಹೈನುಗಾರಿಕೆ ಉತ್ಪನ್ನಗಳ ಮೇಲೆ ಒಂದು ವರ್ಷ ನಿಷೇಧವನ್ನು ಹೇರಿದೆ.

ಅಮುಲ್ ಪ್ರಸಕ್ತ ರಷ್ಯಾದ ಗಲಾಕ್ಟಿಕಾ ಗ್ರೂಪ್ ಜೊತೆ ಹಾಲು, ಗಿಣ್ಣು ಮತ್ತಿತರ ಡೈರಿ ಉತ್ಪನ್ನಗಳ ರಫ್ತಿಗೆ ಮಾತುಕತೆ ನಡೆಸುತ್ತಿದೆ.  ರಷ್ಯಾದ ತಂಡ ನಮ್ಮ ಸೌಲಭ್ಯಗಳನ್ನು ಪರಿಶೀಲಿಸಿದೆ. ಮುಂದಿನ ಕೆಲವು ತಿಂಗಳಲ್ಲಿ ಇದನ್ನು ಅಂತಿಮಗೊಳಿಸುತ್ತೇವೆ ಎಂದು  ಗುಜರಾತ್ ಸಹಕಾರಿ ಮಾರುಕಟ್ಟೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ಸೋಧಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ